ನೆಲ್ಯಾಡಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

0

ಅಧ್ಯಕ್ಷೆ: ಸುಪ್ರೀತಾರವಿಚಂದ್ರ, ಉಪಾಧ್ಯಕ್ಷೆ-ಸುಮನ, ಕಾರ್ಯದರ್ಶಿ-ಸೌಮ್ಯ ಜಯರಾಜ್, ಕೋಶಾಧಿಕಾರಿ-ಸುಮಲತಾ ಆಯ್ಕೆ

ನೆಲ್ಯಾಡಿ: ಇಲ್ಲಿನ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಆ.8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ಪೂರ್ವಭಾವಿ ಸಭೆ ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷೆಯಾಗಿ 5ನೇ ಬಾರಿಗೆ ಸುಪ್ರೀತಾರವಿಚಂದ್ರ ಹೊಸವಕ್ಲು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಮನ, ಕಾರ್ಯದರ್ಶಿಯಾಗಿ ಸೌಮ್ಯ ಜಯರಾಜ್, ಕೋಶಾಧಿಕಾರಿಯಾಗಿ ಸುಮಲತಾ, ಸದಸ್ಯರಾಗಿ ಪ್ರಿಯಾ ಕರ್ವೇಲು, ವಿಮಲ ಬೊನ್ಯಸಾಗು, ವಿಶಾಲಾಕ್ಷಿ ಕೊಲ್ಯೊಟ್ಟು, ಲಲಿತ ಕುಡ್ತಾಜೆ, ಕುಮುದ, ಜಯಂತಿ, ಬೇಬಿ ಸದಾನಂದ, ಗೀತಾ ದೋಂತಿಲ, ಹರಿಣಿ ಮಾದೇರಿ, ಪ್ರೀತಾ ಆಲಂಬಿಲ ಆಯ್ಕೆಗೊಂಡರು. ಶಾಲಾ ಆಡಳಿತ ಮಂಡಳಿ ಸದಸ್ಯ ಸುಬ್ರಾಯ ಪುಣಚ, ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಶ್ರೀರಾಮ ಶಿಶು ಮಂದಿರದ ಅಧ್ಯಕ್ಷೆ ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here