ವಿವೇಕಾನಂದ ಕಾಲೇಜಿನಲ್ಲಿ ಸಿಎ ಕುರಿತು ಮಾಹಿತಿ ಕಾರ್ಯಗಾರ

0

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ ಒಂದು ಮಹತ್ವದ ವೃತ್ತಿಯಾಗಿದೆ. ವಿದ್ಯಾರ್ಥಿಯು ಸಿಎ ಮಾಡುವುದರಿಂದ ಹಲವು ಅವಕಾಶಗಳಿವೆ. ನಮ್ಮ ದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್‌ಗಳ ಕೊರತೆ ಕಾಣುತ್ತಿದೆ. ವಿದ್ಯಾರ್ಥಿಗಳು ಇವುಗಳನ್ನೆಲ್ಲ ಅರಿತುಕೊಂಡು ಒಳ್ಳೆಯ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು ಇಲ್ಲಿ, ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಸಿಎ ಸ್ಟಡೀಸ್ ಇದರ ಸಹಯೋಗದಲ್ಲಿ ಆಯೋಜಿಸಿದ ಸಿಎ ಕುರಿತಾದ ಮಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರವಣ್ ಕುಮಾರ್ ಬಿ ಮತ್ತು ಕೋ ಮಂಗಳೂರು ಇದರ ಸ್ಥಾಪಕ ಮತ್ತು ಚಾರ್ಟೆಡ್ ಅಕೌಂಟೆಂಟ್, ಸಿಎ ಶ್ರವಣ್ ಕುಮಾರ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಒಬ್ಬ ವಿದ್ಯಾರ್ಥಿ ಚಾರ್ಟೆಡ್ ಅಕೌಂಟೆಂಟ್ ಆಗಬೇಕಾದರೆ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಅತ್ಯಗತ್ಯ. ಸಮರ್ಪಣೆಯ ಭಾವದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಖಂಡಿತ ಎಂದು ಸಿಎ ನೋಂದಣಿ ಪ್ರಕ್ರಿಯೆ, ಪರೀಕ್ಷಾ ತಯಾರಿ ತಂತ್ರಗಳು ಮತ್ತು ಕಲಿಕಾ ಮಾದರಿಯ ಕುರಿತ ಹಲವು ಮಾಹಿತಿ ನೀಡಿದರು.

ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಸಿಎ ಸ್ಟಡೀಸ್ ಇದರ ಸಂಯೋಜಕಿ ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ವಿ ಭಟ್ ಸಿಎ ಕಲಿಕೆಯ ಕುರಿತ ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಕೃಷ್ಣ ಗಣರಾಜ ಭಟ್ ಎಲ್ಲಾ ಸಿಎ ಆಕಾಂಕ್ಷಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಐಕ್ಯೂಎಸಿ ಘಟಕದ ಸಂಯೋಜಕಿ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ವಂದಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾ ಜೆ ರಾವ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here