ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ತಾಸ್ಮಿ ಹೇರ್ ಸ್ಟುಡಿಯೋ ಶುಭಾರಂಭ

0

ಪುತ್ತೂರು: ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿರುವಂತೆ ಸೆಲೂನ್ ನಿರ್ವಹಣೆಯಲ್ಲಿ ಯಾವಾಗಲೂ ನವೀನ ಪರಿಹಾರಗಳನ್ನು ಮುಂಚೂಣಿಯಲ್ಲಿ ಇರಿಸುವ ಭರವಸೆಗಳು ಸಹ ಹೆಚ್ಚುತ್ತಿವೆ ಇದಕ್ಕೆ ಪೂರಕವಾಗಿ ಆಧುನಿಕತೆಯ ಶೈಲಿಯನ್ನು ಹೊಂದಿಕೊಂಡು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ತಾಸ್ಮಿ ಹೇರ್ ಸ್ಟುಡಿಯೋ ಮೆನ್ಸ್ ಸಲೂನ್ ಜು.2ರಂದು ಶುಭಾರಂಭಗೊಂಡಿತು.

ನೂತನ ತಾಸ್ಮಿ ಹೇರ್ ಸ್ಟುಡಿಯೋವನ್ನು ನಾಗೇಶ್ ಭಂಡಾರಿಯವರ ದೈವಿಕ ಪ್ರಾರ್ಥನೆಯೊಂದಿಗೆ ಹಿರಿಯರಾದ ಸಂಜೀವಿ ಆರ್ ಮತ್ತು ನಾಗೇಶ್ ಭಂಡಾರಿಯವರು ಜೊತೆಯಾಗಿ ಉದ್ಘಾಟಿಸಿದರು. ಸಂಸ್ಥೆಯ ಮಾಲಕ ಗುರುರಾಜ್ ಬಲ್ನಾಡ್ ಅವರ ತಂದೆ ತಾಲೂಕು ಸವಿತಾ ಸಮಾಜದ ಖಜಾಂಜಿಯಾಗಿರುವ ಜಿ.ಬಿ.ವೆಂಕಟೇಶ್ ಭಂಡಾರಿ ಮತ್ತು ಲೀಲಾವತಿ ವಿ ದಂಪತಿ ಆರಂಭದಲ್ಲಿ ದೇವರ ಮಂಟಪದಲ್ಲಿ ಮೊಮ್ಮಗಳು ತಾಸ್ಮಿ ಜೊತೆಯಲ್ಲಿ ದೀಪ ಪ್ರಜ್ವಲಿಸಿದರು.

ಈ ಸಂದರ್ಭ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಹರೀಶ್, ಸವಿತಾ ಸಮಾಜದ ಅಧ್ಯಕ್ಷ ಪ್ರವೀಣ್ ಎಪಿಎಂಸಿ, ಶ್ರಿನಿಧಿ ಹೇರ್‌ಡ್ರೆಸ್‌ನ ಮಾಲಕ ಹರೀಶ್, ಮಂಜುನಾಥ್ ಉಡುಪಿ, ಪುರುಷೋತ್ತಮ ಭಂಡಾರಿ ಪಡುಮಲೆ, ಜಯಕುಮಾರ್, ಕೆನರಾ ಬ್ಯಾಂಕ್ ನ ಮ್ಯಾನೇಜರ್ ಶ್ರೀರಾಮ್ ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಗುರುರಾಜ್ ಬಲ್ನಾಡ್ ಅವರ ಸಹೋದರಿ ಜಯಶ್ ಮಧುರಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶುಭಾರಂಭದ ಆರಂಭದಲ್ಲಿ ಸಂಸ್ಥೆಯ ಮಾಲಕ ಗುರುರಾಜ್ ಅವರು ಗ್ರಾಹಕರ ಹೇರ್ ಕಟ್ಟಿಂಗ್‌ಗೆ ಚಾಲನೆ ನೀಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ನೂತನ ಸಂಸ್ಥೆಯಲ್ಲಿ ಹೇರ್ ಕಟ್ಟಿಂಗ್ ಮತ್ತು ಅದರ ಜೊತೆಗೆ ಹೆಡ್‌ವಾಶ್, ಹೈಡ್ರೋಫೇಶಿಯಲ್, ಯಾಂತ್ರಿಕರಣದ ಬಾಡಿ ಮಸಾಜ್, ಗ್ರಾಹಕರಿಗೆ ಅನುಕೂಲ ಆಗುವಂತೆ ಹೈಡ್ರೋಲಿಕ್ ಚಯರ್ ಸೌಲಭ್ಯ ಒದಗಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿಣವನ್ನು ಹೊಂದಿರುವ ಸಂಸ್ಥೆಯ ಪ್ರಯೋಜನವನ್ನು ಗ್ರಾಹಕರು ಪಡೆಯುವಂತೆ ಸಂಸ್ಥೆಯ ಮಾಲಕ ಗುರುರಾಜ್ ಬಲ್ನಾಡ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here