ಪುತ್ತೂರು: ಪುತ್ತೂರು ಸಾಲ್ಮರ ನಿವಾಸಿ, ಮಳವೇಲು ಜಿನ್ನಪ್ಪ ಗೌಡ, ಕಾವೇರಿ ದಂಪತಿಯ ಮೊಮ್ಮಗಳು ಆದ್ಯಾ ಗೌಡ ಅವರು 2025ರ ಪ್ರತಿಷ್ಠಿತ ಚೆಸ್ ವಿಶ್ವಕಪ್‌ನಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಆದ್ಯಾ ಗೌಡ ಭಾರತದಿಂದ ಪ್ರತಿನಿಧಿಯಾಗಿ ಜಾಗತಿಕ ಚಾಂಪಿಯನ್ ಶಿಪ್ 2025 ಬುಟುಮಿ, ಜೋರ್ಜಿಯಕ್ಕೆ ನೇಮಕಗೊಂಡಿದ್ದು, ಈಕೆ ಡಾ.ರಮ್ಯ ಮತ್ತು ಅರವಿಂದ್ ಅವರ ಪುತ್ರಿ.