ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಒಕ್ಕಲಿಗ ಗೌಡ ಸೇವಾ ಸಂಘದಿಂದ ಗೌಡ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮ ಆನಡ್ಕ ಸುಶೀಲರವರ ಮನೆಯಲ್ಲಿ ನಡೆಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಶಮಂತ್ ಪಂಜಿಗ, ತನುಷ್ ಮಜಲು ಪುರುಷರಕಟ್ಟೆ ಹಾಗೂ ಪಿಯುಸಿಯಲ್ಲಿ ಹರ್ಷಿತ್ ಮಜಲುರವರನ್ನು ಸನ್ಮಾನಿಸಲಾಯಿತು. ಮುಂಡೂರು ವಲಯದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ ಮಾತನಾಡಿ ಶುಭಹಾರೈಸಿದರು. ಶಾಂತಿಗೋಡು ಗ್ರಾಮದ ಊರ ಗೌಡರಾದ ದೇವಪ್ಪ ಗೌಡ ಓಲಾಡಿ ಮಾತನಾಡಿ ಶುಭ ಹಾರೈಸಿದರು.

ಆನಡ್ಕ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಮಲೆಪಡ್ಪು, ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಶೇಖರ ಗೌಡ ಮಜಲು, ಯುವ ಸಂಘದ ಗೌರವಾಧ್ಯಕ್ಷ ದಿನೇಶ್ ಗೌಡ ಮಜಲು, ಅಧ್ಯಕ್ಷ ಸುರೇಶ್ ಗೌಡ ಮಜಲು, ಊರಿನ ಹಿರಿಯರಾದ ಕೂಸಪ್ಪ ಗೌಡ ಪಂಜಿಗ ಸೇರಿದಂತೆ ಗೌಡ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾ ಬಾಂಧವರು ಉಪಸ್ಥಿತರಿದ್ದರು. ಕೃಷ್ಣಪ್ಪ ಗೌಡ ಮಜಲು ಕಾರ್ಯಕ್ರಮ ನಿರೂಪಿಸಿದರು.