ಪುತ್ತೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಇವರು 2024-25ನೇ ಸಾಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಎನ್.ಎಮ್.ಎಮ್.ಎಸ್ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಹಿತಾ ಕೆ ( ತಿಮ್ಮಪ್ಪ ಗೌಡ ಮತ್ತು ಸುಮಿತ್ರ ಪುತ್ರಿ ), ಶಾನ್ವಿ ಡಿಸೋಜ ( ವಿನ್ಸೆಂಟ್ ಡಿಸೋಜ ಮತ್ತು ಸುನಿತ ಫೆರಾವೊ ಪುತ್ರಿ), ಕ್ರಿಶಾ ವಿಯಾನ್ನಾ ಡಾಯಸ್ ( ಲ್ಯಾನ್ಸಿ ಡಾಯಸ್ ಮತ್ತು ವೀಣಾ ಪಿಂಟೊ ಪುತ್ರಿ) ಇವರು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.