ಪುತ್ತೂರು: ಹಾರಾಡಿ ಸ ಮಾ ಉ ಹಿರಿಯ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಸಂಸತ್ ಚುನಾವಣೆಯ ಮೂಲಕ ರಚಿಸಲಾಯಿತು.
ನಾಯಕನಾಗಿ ಕೃತೇಶ್ 8ನೇ ಬಿ ವಿಭಾಗ, ಹಾಗೂ ಉಪ ನಾಯಕನಾಗಿ ನಿಶಾಂತ್ 7ನೇ ಬಿ ವಿಭಾಗ ಆಯ್ಕೆಯಾದರು. ಗೃಹ ಮಂತ್ರಿಯಾಗಿ ನಿಖಿಲ್ 8ಎ ವಿಭಾಗ, ಆರೋಗ್ಯ ಮಂತ್ರಿಯಾಗಿ ಪವಿತ್ರ 8 ಬಿ ವಿಭಾಗ, ಉಪ ಆರೋಗ್ಯ ಮಂತ್ರಿಯಾಗಿ ದಿಶಾ 7 ಬಿ ವಿಭಾಗ, ಶಿಕ್ಷಣ ಮಂತ್ರಿಯಾಗಿ ಶಿವಾನಿ 8 ಎ ವಿಭಾಗ, ಉಪ ಶಿಕ್ಷಣ ಮಂತ್ರಿಯಾಗಿ ಧರ್ನೆಷ್ 8 ಬಿ ವಿಭಾಗ, ಸ್ವಚ್ಛತಾ ಮಂತ್ರಿಯಾಗಿ ಶರಪುನ್ನೀಶ 8 ಎ ವಿಭಾಗ, ಉಪ ಸ್ವಚ್ಛತಾ ಮಂತ್ರಿಯಾಗಿ ಅಶ್ವಿನಿ 7ಎ ವಿಭಾಗ, ವಾರ್ತಾ ಮಂತ್ರಿಯಾಗಿ ಜೀವಿತಾ ಆರ್ 8 ಬಿ ವಿಭಾಗ, ಉಪ ವಾರ್ತಾ ಮಂತ್ರಿಯಾಗಿ ಆದ್ಯ 7 ಬಿ ವಿಭಾಗ, ಸಾಂಸ್ಕೃತಿಕ ಮಂತ್ರಿಯಾಗಿ ಸುಮನಾ ನಾಯಕ್ 8 ಬಿ ವಿಭಾಗ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಸಂಜನಾ 7 ಸಿ ವಿಭಾಗ, ಗ್ರಂಥಾಲಯ ಮಂತ್ರಿಯಾಗಿ ಮಧುಶ್ರೀ 8 ಎ ವಿಭಾಗ, ಉಪ ಗ್ರಂಥಾಲಯ ಮಂತ್ರಿಯಾಗಿ ರೋಜಾ 7ಎ ವಿಭಾಗ, ಕೃಷಿ ಮಂತ್ರಿಯಾಗಿ ಮಹಮ್ಮದ್ ಶರೀಫ್ 8 ಬಿ ವಿಭಾಗ, ಉಪ ಕೃಷಿ ಮಂತ್ರಿಯಾಗಿ ವಿನ್ಯಾಸ 7ಎ ವಿಭಾಗ, ಕ್ರೀಡಾ ಮಂತ್ರಿಯಾಗಿ ಉದಿಷ್ 8ಎ ವಿಭಾಗ, ಉಪ ಕ್ರೀಡಾ ಮಂತ್ರಿಯಾಗಿ ಗೋಕುಲ್ 7ಎ ವಿಭಾಗ, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಶಬೀರ್ 8 ಬಿ ವಿಭಾಗ, ಉಪ ನೀರಾವರಿ ಮಂತ್ರಿಯಾಗಿ ವಿನ್ಯಾಸ್ 7ಎ ವಿಭಾಗ, ಹಾಗೂ ಸ್ಪೀಕರ್ ಆಗಿ ಪವನ್ ಕುಮಾರ್ 8 ಬಿ ವಿಭಾಗ, ವಿರೋಧ ಪಕ್ಷದ ನಾಯಕಿಯಾಗಿ ಆಕಾಂಕ್ಷಾ 8 ಬಿ ವಿಭಾಗ ಆಯ್ಕೆಯಾದರು. ಮುಖ್ಯ ಶಿಕ್ಷಕ ಕೆಕೆ ಮಾಸ್ತರ್ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಕಿ ಸರೋಜಿನಿ ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.