ಪುತ್ತೂರು ಸ್ನೇಹಸಂಗಮ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಪಾಟ್ರಕೋಡಿ-ಕುಕ್ಕರಬೆಟ್ಟು ಘಟಕಕ್ಕೆ ಚಾಲನೆ-ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸ್ನೇಹಸಂಗಮ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಪಾಟ್ರಕೋಡಿ-ಕುಕ್ಕರಬೆಟ್ಟು ಎಂಬಲ್ಲಿ ಸ್ನೇಹ ಸಂಗಮದ ಘಟಕ ಆರಂಭಕ್ಕೆ ಚಾಲನೆ ನೀಡಲಾಯಿತು.


ಪಾಟ್ರಕೋಡಿಯ ಆಟೋರಿಕ್ಷಾ ಚಾಲಕರ/ಮಾಲಕರ ಮನವಿಯ ಮೇರೆಗೆ ಜು.8ರಂದು ಸ್ನೇಹಸಂಗಮ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಪುತ್ತೂರು ಘಟಕದ ಪದಾಧಿಕಾರಿಗಳ ತಂಡ ಭೇಟಿ ನೀಡಿತು.


ಸ್ನೇಹಸಂಗಮದ ಪುತ್ತೂರು ಘಟಕದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು. ಬಳಿಕ ನೂತನ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಾಟ್ರಕೋಡಿ-ಕುಕ್ಕರಬೆಟ್ಟು ಘಟಕದ ಗೌರವಾಧ್ಯಕ್ಷರಾಗಿ ಫಾರೂಕ್ ಬಾಯಬೆ, ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಪಾಟ್ರಕೋಡಿ, ಕಾರ್ಯದರ್ಶಿಯಾಗಿ ಅಶ್ರಫ್ ಟಿ. ಪಾಟ್ರಕೊಡಿರವರನ್ನು ಆಯ್ಕೆ ಮಾಡಲಾಯಿತು.


ಪುತ್ತೂರು ಘಟಕದ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಸಂಚಾಲಕ ಅರವಿಂದ್ ಪೆರಿಗೇರಿ, ಕೋಶಾಧಿಕಾರಿ ಸಿಲ್ವೆಸ್ಟಾರ್ ಡಿಸೋಜ, ಹಾಗೂ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಕರ್ಮಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here