ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಗ್ರಾಮ ವಿಕಾಸ ಯೋಜನೆಯ ಸದಸ್ಯರಿಗೆ ವಿಮಾ ಮೊತ್ತದ ಚೆಕ್ ಹಸ್ತಾಂತರ

0

ವಿಟ್ಲ : ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪುತ್ತೂರು ವಲಯ ಅರಿಯಡ್ಕ ಗ್ರಾಮದ ಒಡಿಯೂರು ಶ್ರೀ ಶ್ರೀಕೃಷ್ಣ ವಿಕಾಸ ವಾಹಿನಿ ಸದಸ್ಯರಾದ ಅಕ್ಕಯ್ಯ ರವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಪರಿಹಾರ ನಿಧಿಯಿಂದ ವಿಮಾ ಮೊತ್ತ ರೂ.150000ದ ಚೆಕ್ ಅನ್ನು ವಾರೀಸುದಾರರಾದ ಜನಾರ್ಧನ ರವರಿಗೆ
ವಿಮಾ ಮೊತ್ತದ ಚೆಕ್‌ ಅನ್ನು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಜಯಪ್ರಕಾಶ್ ರೈ ಯನ್. ರವರು ವಿತರಿಸಿದರು.

ಪುತ್ತೂರು ಶಾಖಾ ವ್ಯವಸ್ಥಾಪಕರಾದ ಪವಿತ್ರ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪುತ್ತೂರು ತಾಲೂಕು ಮೇಲ್ವಿಚಾರಕರಾದ ಸವಿತಾ ರೈ, ಕುಂಬ್ರ ವಲಯದ ಸಂಯೋಜಕಿ ಜಯಂತಿ ಜಿ., ಅರಿಯಡ್ಕ ಗ್ರಾಮದ ಸೇವಾದೀಕ್ಷಿತರಾದ ಪ್ರೇಮಲತಾ ಎಸ್ ರೈ .ಕಛೇರಿ ಸಿಬ್ಬಂದಿ ಸುಶ್ಮಿತಾ ಹಾಗೂ ಪುತ್ತೂರು ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here