ಪುತ್ತೂರು: ಸ್ಟೇಟ್ ಟೈಲರ್ ಅಸೋಸಿಯೇಶನ್ ಪಾಣಾಜೆ ವಲಯದ ಮಹಾಸಭೆಯು ಬೆಟ್ಟಂಪಾಡಿ ಶಿವ ನಂದಿನಿ ಹಾಲಿನ ಡೈರಿಯ ಹಾಲ್ನಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಪಾಣಾಜೆ ವಲಯದ ಅಧ್ಯಕ್ಷೆ ಶಶಿಕಲಾ ಡಿ ಕುಲಾಲ್ ಇವರು ವಹಿಸಿದರು. ನಿಕಟಪೂರ್ವ ಅಧ್ಯಕ್ಷೆ ಜಯಂತಿ ಉರ್ಲಾಂಡಿ ಹಾಗೂ ಜಯರಾಮ ಬಿ ಎನ್ ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ನಾಯ್ಕ ಹಾಗೂ ನಗರ ವಲಯದ ಅಧ್ಯಕ್ಷರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಶಿಕಲಾ ಡಿ ಕುಲಾಲ್, ಕಾರ್ಯದರ್ಶಿ ಜಾನಕಿ, ಕೋಶಾಧಿಕಾರಿಯಾಗಿ ನೀತಾ, ಉಪಾಧ್ಯಕ್ಷೆಯಾಗಿ ಸುಜಾತ ರೈ, ಜತೆ ಕಾರ್ಯದರ್ಶಿಯಾಗಿ ಪುಷ್ಪಾವತಿ ಕಜೆ, ಉಪಸಮಿತಿಯಲ್ಲಿ ಶೇಷನ್ ಪಾರ, ಸುರೇಖಾ ನಿಡ್ಪಳ್ಳಿ, ಲಲಿತಾ ಪಿದಾರ, ಕೇಸರಿ, ರಮಣಿ, ವಿದ್ಯಾಲಕ್ಷ್ಮಿ, ಮಾಲತಿಕಾನ ಇವರುಗಳು ಆಯ್ಕೆಯಾದರು.