ಕೆಂಪು ಕಲ್ಲು‌ಗಣಿಗಾರಿಕೆ ಟೈಟ್ ಕಾನೂನನ್ನು ಸಡಿಲಿಕೆ ಮಾಡಿ: ಗೃಹ‌ಸಚಿವರಲ್ಲಿ ಅಶೋಕ್ ರೈ ಮನವಿ

0

ಪುತ್ತೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಯ ವಿಚಾರದಲ್ಲಿ ಕಾನೂನು ಟೈಟ್‌ ಮಾಡಲಾಗಿದೆ ಅದನ್ನು ಸ್ವಲ್ಪ ಸಡಿಲಿಕೆ ಮಾಡಿ ಎಂದು ಶಾಸಕ ಅಶೋಕ್ ರೈ ಗೃಹ ಸಚಿವ ಡಾ.ಜಿ ಪರಮೇಶ್ಚರ್ ಅವರಲ್ಲಿ‌ ವಿನಂತಿಸಿದರು.


ಕೆಂಪು ಕಲ್ಲು‌ಗಣಿಗಾರಿಕೆ‌ ಕಾನೂನು ಟೈಟ್ ಆಗಿರುವ ಕಾರಣ ಬಡವರಿಗೆ ಮನೆ ಕಟ್ಟಲು ಕಷ್ಟವಾಗಿದೆ. ಗ್ರಾಮಾಂತರ ಜನರು ಇದರಿಂದ ಸಂಕಷ್ಟ ಎದುರಿಸುವಂತಾಗಿದೆ, ಅನೇಕ‌ ಮಂದಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವರು ಈ ವಿಚಾರದಲ್ಲಿ ನೀವು ಗಣಿ ಇಲಾಖೆ ಸಚಿವರಲ್ಲಿ ಮಾತನಾಡಿ ಅವರ ಗಮನಕ್ಕೆ ತನ್ನಿ, ನೀವು ಆಡಳಿತ ಪಕ್ಷದ ಶಾಸಕರಿದ್ದೀರಿ ಮಾತನಾಡಿ ಸರಿಪಡಿಸಿಕೊಳ್ಳಿ, ನೀವು ಹುಷಾರಿದ್ದೀರಿ ಎಂದು ಹೇಳಿದರು.

LEAVE A REPLY

Please enter your comment!
Please enter your name here