ಪುತ್ತೂರು: ಪೈಯನ್ನೂರು ಮಾಧವ ಪೂದುವಾಳರವರ ಪ್ರಶ್ನಾ ಚಿಂತನೆಯ ಮೂಲಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಸಂಕಲ್ಪ ಪ್ರಾರ್ಥನೆಯನ್ನು ಜು.9ರಂದು ನಡೆಸಲಾಯಿತು.

ಬ್ರಹ್ಮಕಲಶೋತ್ಸವದ ಅಧ್ವರ್ಯವನ್ನು ಮಾಜಿ ಸಂಸದ,ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರಿಗೆ ವಹಿಸಲಾಯಿತು.
ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿಗಳಾದ ರವೀಶ್ ತಂತ್ರಿ ಕುಂಟಾರು ಹಾಗೂ ವಾಸ್ತುಶಿಲ್ಪಿಗಳಾದ ಪ್ರಸಾದ್ ಮುನಿಯಂಗಳ ಇವರ ಮಾರ್ಗದರ್ಶನದಲ್ಲಿ ನಡೆಸುವಂತೆ ಸಂಕಲ್ಪ ಪ್ರಾರ್ಥನೆಯನ್ನು ನೆರವೇರಿಸಲಾಯಿತು . ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿಗಳಾದ ಶಿವರಾಂ ಪಿ, ಶಿವರಾಂ ಶರ್ಮ, ಶ್ರೀಕಾಂತ್ ಪಿ ಎಸ್ ಉಪಸ್ಥಿತರಿದ್ದರು.