ಪುತ್ತೂರು: ವಿವಿಧ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆ

0

ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಅನುದಾನ ಶೀಘ್ರ ಬಿಡುಗಡೆಯಾಗಲಿದೆ; ಶಾಸಕ ಅಶೋಕ್ ರೈ


ಪುತ್ತೂರು:
ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ.

ಹಂಚಿಕೆಯಾದ ಅನುದಾನಗಳ ವಿವರ :
ಬಡಗನ್ನೂರು ಗ್ರಾಮದ ಮೈಂದನಡ್ಕ ದ.ಕ.ಜಿ.ಪಂ ಶಾಲೆಗೆ ಕಂಪೌಂಡ್ ರಚನೆಗೆ 160000.00 ಲಕ್ಷ ರೂ, ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಸರ್ವೆ ಇದರ ಕಟ್ಟಡ ದುರಸ್ಥಿ ಕಾಮಗಾರಿಗೆ ,250000.00 ಲಕ್ಷ ರೂ, 34 ನೆಕ್ಕಿಲಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ನೆಕ್ಕಿಲಾಡಿ ಶಾಲೆಗೆ ಇಂಟರ್ ಲಾಕ್‌ ಅಳವಡಿಕೆಗೆ 250000.00 ಲಕ್ಷ ರೂ, ಆರ್ಯಾಪು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೆಂಟ್ಯಾರು ಶಾಲಾ ದುರಸ್ಥಿ ಕಾಮಗಾರಿಗೆ 210000.00 ಲಕ್ಷ ರೂ, ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡಬೆಟ್ಟು ಕುರಿಯಾ ಇದರ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿಗೆ 200000.00 ಲಕ್ಷ ರೂ ,ನೆಟ್ಟಣಿಗೆ ಮುಡ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಶಾಲಾ ಕೊಠಡಿ ದುರಸ್ಥಿಗೆ 210000.00 ಲಕ್ಷ ರೂ, ನೆಟ್ಟಣಿಗೆ ಮುಡ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿದಡಿ ಶಾಲಾ ಕೊಠಡಿ ಕಾಮಗಾರಿಗೆ 200000.00 ಲಕ್ಷ ರೂ, ಕೊಳ್ತಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಇದರ ಕೊಠಡಿ ದುರಸ್ಥಿ ಕಾಮಗಾರಿಗೆ 200000.00 ಲಕ್ಷ ರೂ, ಅರಿಯಡ್ಕ ಗ್ರಾಮದ ಮಾಡ್ನೂರು ಕಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಚಾವಣಿ ದುರಸ್ತಿಗೆ 220000.00 ಲಕ್ಷ ರೂ, ಮುಂಡೂರು ಗ್ರಾಮದ ಭಕ್ತಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಚಾವಣಿ ದುರಸ್ತಿಗೆ 210000.00. ಲಕ್ಷ ರೂ, ಕುಡಿಪ್ಪಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡಿಪ್ಪಾಡಿ ಶಾಲಾ ಮೇಲ್ಛಾವಣಿಗೆ ಶೀಟು ಅಳವಡಿಕೆಗೆ 373000.00 ಲಕ್ಷ ರೂ, ಬನ್ನೂರು, ಪಡ್ನೂರು ಗ್ರಾಮದ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ರಚನೆಗೆ 150000.00 ಲಕ್ಷ ರೂ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಬೋರ್‌ವೆಲ್ ಮತ್ತು ಪಂಪು ಅಳವಡಿಕೆಗೆ 200000.00 ಲಕ್ಷ ರೂ, 34 ನೆಕ್ಕಿಲಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿ ಇದರ ಗ್ರಂಥಾಲಯ ಕೊಠಡಿ ಇದರ ದುರಸ್ಥಿಗೆ 300650.00 ಲಕ್ಷ ರೂ, ನರಿಮೊಗ್ರು ಗ್ರಾಮದ ಪೇರಡ್ಕ ಎಂಬಲ್ಲಿ ಹೊಸ ಅಂಗನವಾಡಿ ಕಟ್ಟಡ ರಚನೆಗೆ 500000.00 ಲಕ್ಷ ರೂ, ಕೆದಂಬಾಡಿ ಗ್ರಾಮದ ಇದ್ಪಾಡಿ ಹೊಸ ಅಂಗನವಾಡಿ ಕಟ್ಟಡ ರಚನೆಗೆ 500000.00 ಲಕ್ಷ ರೂ. ,ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬಲ್ಲಿ ಹೊಸ ಅಂಗನವಾಡಿ ಕಟ್ಟಡ ರಚನೆ 500000.00 ಲಕ್ಷ ರೂ , ಹಿರೇಬಂಡಾಡಿ ಗ್ರಾಮದ ಪಾಲೆತ್ತಡ್ಕ ಅಂಗನವಾಡಿ ಕೇಂದ್ರ ಕಟ್ಟಡದ ಮೇಲ್ಚಾವಣಿ ಮತ್ತು ಕಿಟಕಿ ದುರಸ್ತಿ 200000.00, ಲಕ್ಷ ರೂ , 34 ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಅಂಗನವಾಡಿ ಕೇಂದ್ರದ ಕಟ್ಟಡ ಮೇಲ್ಚಾವಣಿ ಮತ್ತು ಕಿಟಕಿ ದುರಸ್ತಿ 200000.00 ಲಕ್ಷ ರೂ, ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಅಂಗನವಾಡಿ ಕೇಂದ್ರ ಕಟ್ಟಡದ ಮೇಲ್ಚಾವಣಿ ಮತ್ತು ಕಿಟಕಿ ದುರಸ್ತಿ 200000.00 ಲಕ್ಷ ರೂ , ನರಿಮೊಗ್ರು ಗ್ರಾಮದ ಪಂಜಳ ಅಂಗನವಾಡಿ ಕೇಂದ್ರ ಕಟ್ಟಡದ ಮೇಲ್ಚಾವಣಿ ಮತ್ತು ಕಿಟಕಿ ದುರಸ್ತಿಗೆ 200000.00 ಲಕ್ಷ ರೂ, ಬನ್ನೂರು ಗ್ರಾಮ ಪಂಚಾಯತ್‌ನ ಪಡ್ನೂರು ಗ್ರಾಮದ ಪಡ್ಡಾಯೂರು ಅಂಗನವಾಡಿ ಕೇಂದ್ರ ಕಟ್ಟಡದ ಮೇಲ್ಚಾವಣಿ ಮತ್ತು ಕಿಟಕಿ ದುರಸ್ತಿಗೆ 200000.00 ಲಕ್ಷ ರೂ, ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಅಂಗನವಾಡಿ ಕೇಂದ್ರದ ಆವರಣಗೋಡೆ ನಿರ್ಮಾಣಕ್ಕೆ 233650.00 ಲಕ್ಷ ರೂ, ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಅಂಗನವಾಡಿ ಕೇಂದ್ರ ಆವರಣಗೋಡೆ ನಿರ್ಮಾಣಕ್ಕೆ 200000.00 ಲಕ್ಷ ರೂ , ಮುಂಡೂರು ಗ್ರಾಮದ ಸೊರಕೆ ಅಂಗನವಾಡಿ ಕೇಂದ್ರ ಕಟ್ಟಡದ ಮೇಲ್ಚಾವಣಿ ಮತ್ತು ಕಿಟಕಿ ದುರಸ್ತಿಗೆ 250000.00 ಲಕ್ಷ ರೂ, ಕೋಡಿಂಬಾಡಿ ಗ್ರಾಮ ಪಂಚಾಯತ್‌ ಗ್ರಂಥಾಲಯ ಕಟ್ಟಡ ರಚನೆಗೆ 300000.00 ಲಕ್ಷ ರೂ, ಪಾಣಾಜೆ ಗ್ರಾಮ ಪಂಚಾಯತ್ ಗ್ರಂಥಾಲಯ ಕಟ್ಟಡ ರಚನೆಗೆ 500000.00 ಲಕ್ಷ ರೂ, ನರಿಮೊಗ್ರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಮೊಗರು ಶಾಲಾ ಗ್ರಂಥಾಲಯಕ್ಕೆ ಪೀಠೋಪಕರಣ ಖರೀದಿಗೆ 200000.00 ಲಕ್ಷ ರೂ , ಬಲ್ನಾಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಿಯೂರುಕಟ್ಟೆ ಪೀಠೋಪಕರಣ ಖರೀದಿಗೆ 200000.00 ಲಕ್ಷ ರೂ, ನರಿಮೊಗ್ರು ಗ್ರಾಮ ಪಂಚಾಯತ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿಗೋಡು ಶಾಲಾ ಗ್ರಂಥಾಲಯಕ್ಕೆ ಪೀಠೋಪಕರಣ ಖರೀದಿಗೆ 150000.00 ಲಕ್ಷ ರೂ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಗ್ರಂಥಾಲಯಕ್ಕೆ ಪೀಠೋಪಕರಣ ಖರೀದಿಗೆ 200000.00 ಲಕ್ಷ ರೂ, ಮುಂಡೂರು ಗ್ರಾಮದ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಗ್ರಂಥಾಲಯಕ್ಕೆ ಪೀಠೋಪಕರಣ ಖರೀದಿಗೆ 200000.00 ಲಕ್ಷ ರೂ , ಕೆಯ್ಯೂರು ಗ್ರಾಮ ಪಂಚಾಯತ್‌ ಗ್ರಂಥಾಲಯ ಡಿಜಿಟಲೀಕರಣ 300000.00 ಲಕ್ಷ ರೂ , ಪಾಣಾಜೆ ಗ್ರಾಮ ಪಂ.ವ್ಯಾಪ್ತಿಯ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿಗೆ ಎಕ್ಸ್-ರೇ ಮೇಷಿನ್ ಖರೀದಿಗೆ 500000.00 ಲಕ್ಷ ರೂ, ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೀಠೋಪಕರಣ ಖರೀದಿಗೆ 500000.00 ಲಕ್ಷ ರೂ, ಪಾಣಾಜೆ ಗ್ರಾಮ ಪಂ. ವ್ಯಾಪ್ತಿಯ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಉಪಕರಣಗಳ ಖರೀದಿ 250000.00 ಲಕ್ಷ ರೂ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಮೇಲ್ಚಾವಣಿ ದುರಸ್ತಿಗೆ 300000.00 ಲಕ್ಷ ರೂ, ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಟರ್ ಪ್ಯೂರಿ-ಪೈರ್ & ರೆಪ್ರಿಜಿರೇಟರ್‌ ಖರೀದಿಗೆ 200000.00 ಲಕ್ಷ ರೂ, ಪಾಣಾಜೆ ಗ್ರಾಮದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆಮಿ ಅಟೋ ಅನಲೈಸರ್ ಮಿಷನ್ ಖರೀದಿಗೆ 255767.00 ಲಕ್ಷ ರೂ, ಕೋಡಿಂಬಾಡಿ ಗ್ರಾಮದ ಬೋಳಾಜೆ ಸರೋಳಿಯಿಂದ ದೆಕ್ಕಾಜೆ ಹಾದು ಹೋಗುವ ರಸ್ತೆಗೆ ಕಾಂಕ್ರಿಟೀಕರಣಕ್ಕೆ 300000.00 ಲಕ್ಷ ರೂ, ಬೆಟ್ಟಂಪ್ಪಾಡಿ ಗ್ರಾಮದ ಮಿತ್ತಡ್ಕ ಎಂಬಲಿ ರಸ್ತೆಗೆ ಕಾಂಕ್ರಿಟೀಕರಣ 250000.00 ಲಕ್ಷ ರೂ, ಮುಂಡೂರು ಗ್ರಾಮದ ಅಜಲಾಡಿ ಎಂಬಲ್ಲಿ ಸಾರ್ವಜನಿಕ ರಸ್ತೆಗೆ ಕಾಂಕ್ರಿಟೀಕರಣಕ್ಕೆ 400000.00 ಲಕ್ಷ ರೂ, ಕೋಡಿಂಬಾಡಿ ಗ್ರಾಮದ ಕಜೆ ಅರ್ಭಿ ಬೆಳ್ಳಿಪ್ಪಾಡಿ ರಸ್ತೆಗೆ ಕಾಂಕ್ರಿಟೀಕರಣಕ್ಕೆ 200000.00 ಲಕ್ಷ ರೂ ,ಆರ್ಯಾಪು ಗ್ರಾಮದ 5ನೇ ವಾರ್ಡ್ ಸಂಪ್ಯ ಆರ್ಯಾಪು ರಸ್ತೆಗೆ ಕಾಂಕ್ರಿಟೀಕರಣಕ್ಕೆ 300000.00 ಲಕ್ಷ ರೂ, ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳ ರಸ್ತೆಗೆ ಕಾಂಕ್ರಿಟೀಕರಣ 500000.00 ಲಕ್ಷ ರೂ, ಪಾಣಾಜೆ ಗ್ರಾಮದ ಆರ್ಲಪದವು ಗುವೆಲ್‌ ಗದ್ದೆ ರಸ್ತೆಗೆ ಕಾಂಕ್ರಿಟೀಕರಣಕ್ಕೆ 150000.00 ಲಕ್ಷ ರೂ , ಕಸಬ ಪುತ್ತೂರು ತಾಲೂಕು ನೆಲ್ಲಿಕಟ್ಟೆ ಶಾಲೆಯ ವಿಶೇಷ ಚೇತನ ಮಕ್ಕಳ ಶೌಚಾಲಯ ನಿರ್ಮಾಣ ಕಾಮಗಾರಿಗೆ 500000.00 ಲಕ್ಷ ರೂ , ಕಸಬ ಪುತ್ತೂರು ತಾಲೂಕು ನೆಲ್ಲಿ ಕಟ್ಟೆ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಸಾಧನಾ ಸಲಕರಣಗಳು ಹಾಗೂ ಕಂಪ್ಯೂಟರ್ ಖರೀದಿಗೆ 500000.00 ಲಕ್ಷ ರೂ,ಪುತ್ತೂರು ತಾಲೂಕು ಸರ್ವೆ ಗ್ರಾಮದ ಪರಿಶಿಷ್ಟ ಪಂಗಡ ಮರಾಠಿ ಸಮಾಜ ಸೇವಾ ಸಂಘ ಎಲಿಯ ಸರ್ವೆ ಎಂಬಲ್ಲಿ ಒಂದು ಹೈಮಾಸ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ಕುರಿಯಾ ಗ್ರಾಮದ ಹೊಸಮಾರು ಪ.ಪಂಗಡ ಕಾಲನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ಕೆಯ್ಯೂರು ಗ್ರಾಮದ ಕೆ.ಪಿ.ಎಸ್ ಶಾಲಾ ಬಳಿಪ.ಪಂಗಡ ಕಾಲೋನಿಗೆ ಒಂದು ಹೈ-ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ಕೊಡಿಂಬಾಡಿ ಗ್ರಾಮದ ಕೃಷ್ಣಗಿರಿ ಎಸ್.ಟಿಕಾಲೋನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆ 125000.00 ಲಕ್ಷ ರೂ, ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎಸ್.ಟಿ ಕಾಲೋನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ಮಾಡ್ನೂರು ಗ್ರಾಮದ ಮಾಣಿಯಡ್ಕ ಎಸ್.ಟಿ ಕಾಲೋನಿ ಸ್ಮಶಾನದ ಬಳಿ ಒಂದು ಹೈ-ಮಾಸ್ಟ್ ಲೈಟ್ ಅಳವಡಿಕೆ 125000.00 ಲಕ್ಷ ರೂ, ಮಾಡ್ನೂರು ಗ್ರಾಮದ ಸಸ್ಪೆಟ್ಟಿ- ಪರನೀರುಎಸ್.ಟಿ ಕಾಲೋನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ ,ಮುಂಡಕೊಚ್ಚಿ ಎಸ್.ಟಿ ಕಾಲೋನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ನಿಡ್ಪಳ್ಳಿ ಗ್ರಾಮದ ಮಾಯಿಲಕೋಟೆ ಎಸ್.ಟಿ ಕಾಲೋನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ನೆಕ್ಕಿಲಾಡಿ ಗ್ರಾಮದ ಶಾಂತಿಯಡ್ಕ ಎಸ್.ಟಿ ಕಾಲೋನಿಗೆ ಹೋಗುವ ರಸ್ತೆ ಬಳಿ ಒಂದು -ಮಾಸ್ಟ್ ಲೈಟ್‌ ಅಳವಡಿಕೆಗೆ 125000.00 ಲಕ್ಷ ರೂ, ಒಳಮೊಗ್ರು ಗ್ರಾಮದ ಮುಂಡೋವುಮೂಲೆ ಪ.ಪಂಗಡ ಕಾಲನಿ ಬಳಿ ಒಂದು -ಮಾಸ್ಟ್ ಲೈಟ್ ಅಳವಡಿಕೆಗೆ 125000.00 ಲಕ್ಷ ರೂ, ಬಲ್ನಾಡು ಗ್ರಾಮದ ಕೂಟೇಲು ಪರಿಶಿಷ್ಟ ಜಾತಿ ಕಾಲೋನಿ ಬಾವಿ ರಚನೆಗೆ 100000.00 ಲಕ್ಷ ರೂ, ಬೆಟ್ಟಂಪ್ಪಾಡಿ ಗ್ರಾಮದ ರೆಂಜ ಪರಿಶಿಷ್ಟ ಜಾತಿ ಕಾಲೋನಿ ಕಾಟ್ರಸ್ ಬಳಿ ತಡೆಗೋಡೆ ರಚನೆಗೆ 300000.00 ಲಕ್ಷ ರೂ ಅನುದಾನ ಬಿಡುಗಡೆಯಾಗಿರುತ್ತದೆ .

ಶಾಸಕನಾಗಿ ಎರಡು ವರ್ಷದ ಅವಧಿಯಲ್ಲಿ 2006 ಕೋಟಿ ಅನುದಾನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ, ಯಾವ ಇಲಾಖೆಯ ಮೂಲಕ ಅನುದಾನ ತರಲು ಅವಕಾಶ ಇದೆಯೋ ಅಲ್ಲಿಂದೆಲ್ಲ ಅನುದಾನವನ್ನು ತರುವ ಕೆಲಸವನ್ನು ಮಾಡುತ್ತಿದ್ದೇನೆ. ಕ್ಷೇತ್ರದ ಜನರಿಂದ ನೂರಾರು ಬೇಡಿಕೆ ಮನವಿಗಳು ಬಂದಿದೆ. ಜನರ ಬೇಡಿಕೆಯನ್ನು ಒಂದೊಂದಾಗಿ ಪರಿಗಣಿಸಲಾಗುವುದು. ಸರಕಾರದಿಂದ ವಿಶೇಷ ಅನುದಾನವನ್ನು ತಂದು ಶಾಲೆ, ಅಂಗನವಾಡಿ, ಕಾಲನಿ, ರಸ್ತೆ, ಪೀಠೋಕರಣಗಳ ಖರೀದಿ ಸೇರಿದಂತೆ ಹಲವು ಪ್ರಮುಖ ಸಣ್ಣ ಹಾಗೂ ದೊಡ್ಡ ಮೊತ್ತದ ಅನುದಾನವನ್ನು ಹಂಚಿಕೆ ಮಾಡಲಾಗಿದೆ , ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಪುತ್ತೂರಿಗೆ ಹರಿದು ಬರಲಿದೆ. ಜನತೆಯ ನಿರೀಕ್ಷೆಗೂ ಮೀರಿ ಪುತ್ತೂರು ಕ್ಷೇತ್ರವನ್ನು ಅಭಿವೃದ್ದಿ ಮಾಡುವ ಉದ್ದೇಶವಿದ್ದು ಜನತೆಯ ಸಹಕಾರವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here