ಕಾಣಿಯೂರು: ಹಲವಾರು ವರ್ಷಗಳಿಂದ ಪೌರೋಹಿತ್ಯ ಸೇವೆಯನ್ನು ಅತ್ಯಂತ ನಿಷ್ಠೆಯಿಂದ ಮಾಡಿರುವ ಗುರುಸಮಾನ ಪದ್ಮನಾಭ ಭಟ್ ಕಟ್ಟತ್ತಾರು ಇವರಿಗೆ ಭಾರತೀಯ ಜನತಾ ಪಾರ್ಟಿ ಕಾಣಿಯೂರು ಬೂತ್ 82ರ ವತಿಯಿಂದ ಗುರುಪೂರ್ಣಿಮೆ ದಿನದ ಅಂಗವಾಗಿ ಅವರ ನಿವಾಸದಲ್ಲಿ ಗುರುವಂದನೆ ಸಲ್ಲಿಸಿ, ಶಾಲು, ಹಾರ, ಪೇಟ, ಹಣ್ಣುಹಂಪಲು ನೀಡಿ ಗೌರವಿಸಲಾಯಿತು.

ಶ್ರೀ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್, ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಗೋಪಾಲಕೃಷ್ಣ ಎಲುವೆ, ಬೂತ್ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ,ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಧರ್ಮೇಂದ್ರ ಗೌಡ ಕಟ್ಟತ್ತಾರು, ಮಂಡಲ ಓಬಿಸಿ ಮೋರ್ಚಾ ಸದಸ್ಯ ಸುಂದರ ಬೆದ್ರಾಜೆ, ಚಾರ್ವಾಕ ಪ್ರಾ. ಕೃ. ಪ. ಸ. ಸಂಘ ನಿರ್ದೇಶಕ ಪರಮೇಶ್ವರ ಅನಿಲ, ಮಾಜಿ ನಿರ್ದೇಶಕ ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕ ರಾಜೇಶ್ ಮೀಜೆ, ಮಾಜಿ ಅಧ್ಯಕ್ಷ ಅನಂತರಾಮ ಉಪಾಧ್ಯಾಯ, ಗ್ರಾ. ಪಂ. ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಬಾಲಕೃಷ್ಣ ಬಸ್ತಿ, ಪದ್ಮನಾಭ ಗೌಡ ಗುಂಡಿಗದ್ದೆ, ಕುಸುಮಾಧರ ಅನಿಲ, ಧರ್ಮಪಾಲ ಗೌಡ ಕಂಪ, ಬಿಜೆಪಿ ಮಹಿಳಾ ಪ್ರಮುಖ್ ನಾಗವೇಣಿ ಬೆದ್ರಾಜೆ, ರೋಹಿನಿ ಸುವರ್ಣ ಅಬೀರ, ವಸಂತಿ ಬಸ್ತಿ ಬೆದ್ರಾಜೆ, ಸುಚಿತ್ರಾ ಕಟ್ಟತ್ತಾರು, ಪ್ರಶಾಂತ್ ಭಟ್ ಕಟ್ಟತ್ತಾರು ಹಾಗೂ ಮನೆಯವರು ಉಪಸ್ಥಿತರಿದ್ದರು.