ಮಕ್ಕಳ ತಜ್ಞ ವೈದ್ಯ ಡಾ.ಶ್ರೀಕಾಂತ್ ರಾವ್ ಅವರ ನೂತನ ಕ್ಲಿನಿಕ್ ಚೈಲ್ಡ್ ಕೇರ್ ಪಾಲಿಕ್ಲಿನಿಕ್ ಶುಭಾರಂಭ

0

ಪುತ್ತೂರು: ಮಕ್ಕಳ ತಜ್ಞ ವೈದ್ಯರಾಗಿ ಸುಮಾರು 40 ವರ್ಷ ಅನುಭವ ಹೊಂದಿರುವ ಡಾ.ಶ್ರೀಕಾಂತ್ ರಾವ್ ಅವರ ನೂತನ ಕ್ಲಿನಿಕ್ ಚೈಲ್ಡ್ ಕೇರ್ ಪಾಲಿಕ್ಲಿನಿಕ್ ಪುತ್ತೂರು ಮುಖ್ಯರಸ್ತೆ ಜಿ.ಎಲ್ ವನ್ ಮಾಲ್ ಎದುರಿನ ಸಿಟಿ ಸೆಂಟರ್‌ನ ಪ್ರಥಮ ಮಹಡಿಯಲ್ಲಿ ಜು.11ರಂದು ಶುಭಾರಂಭಗೊಂಡಿತು.


ಡಾ. ಶ್ರೀಕಾಂತ್ ಅವರ ಸೇವೆ ಎಲ್ಲರಿಗೂ ಸಿಗಲಿ:
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸಹಕಾರರತ್ನ ಕೆ ಸೀತಾರಾಮ ರೈ ಅವರು ನೂತನ ಕ್ಲಿನಿಕ್ ಅನ್ನು ಉದ್ಘಾಟಿಸಿ ಮಾತನಾಡಿ ಇವತ್ತಿನ ಜೀವನ ಮತ್ತು ಆಹಾರದ ಶೈಲಿಯಲ್ಲಿ ಹುಟ್ಟವ ಮಕ್ಕಳು ಆರೋಗ್ಯವಂತರಾಗಿ ಹುಟ್ಟುವ ಪರಿಸ್ಥಿಯಲ್ಲಿಲ್ಲ. ಆದರೆ ಹುಟ್ಟಿದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಆದಾಗ ಹಳ್ಳಿಯ ಜನತೆಗೆ ವೈದ್ಯರ ಬಳಿಗೆ ಹೋಗಲು ಕಷ್ಟ. ಕಳೆದ 35 ವರ್ಷಗಳಿಂದ ನನಗೂ ಡಾ. ಶ್ರೀಕಾಂತ್‌ರಿಗೂ ಅವಿನಾಭಾವ ಸಂಬಂಧ. ಅವರು ಪುತ್ತೂರಿಗೆ ತುಂಬಾ ಸೇವೆ ನೀಡಿದ್ದಾರೆ. ಬೆಳೆಯುತ್ತಿರುವ ಪುತ್ತೂರಿಗೆ ಇತಂಹ ಕ್ಲಿನಿಕ್ ಅವಶ್ಯಕತೆ ಇದೆ. ಯಾಕೆಂದರೆ ಕೆಲವೇ ಸಮಯದಲ್ಲಿ ಪುತ್ತೂರು ಜಿಲ್ಲೆಯಾಗಲಿದೆ. ಮೆಡಿಕಲ್ ಕಾಲೇಜು ಬರುವ ಸಾಧ್ಯತೆ ಇದೆ. ಇಂತಹ ಸಂದರ್ಭ ಡಾ. ಶ್ರೀಕಾಂತ್ ಅವರ ಸೇವೆ ಜನಸಾಮಾನ್ಯರಿಗೆ ಸಿಗುವಂತಾಗಲಿ ಎಂದರು.


ಮಕ್ಕಳ ಪ್ರೀತಿಯ ವೈದ್ಯರು:
ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ.ವಿಜಯ ಹಾರ್ವಿನ್ ಅವರು ಮಾತನಾಡಿ ಡಾ. ಶ್ರೀಕಾಂತ್ ಅವರು ಹೃದಯ ಶ್ರೀಮಂತಿಗೆ ಇರುವ ಮನುಷ್ಯ. ಅವರು ಮಕ್ಕಳನ್ನು ಪ್ರೀತಿ ಮಾಡುವ ವೈದ್ಯರು. ಡಾ. ಶಿವಾನಂದ ಅವರ ಸ್ಥಳದಲ್ಲಿ ಕ್ಲಿನಿಕ್ ಆರಂಭಿಸಿದ ಅವರು ಜನಪರವಾಗಿ ಜನರಿಗೆ ಆರೋಗ್ಯ ಕೊಡುವ ಸೇವೆ ಮಾಡಿದ್ದಾರೆ. ಹಲವು ಶಿಬಿರ ಮಾಡಿ ಉಚಿತ ಮೆಡಿಸಿನ್ ಕೊಟ್ಟಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಕಾಳಜಿಯ ಜೊತೆ 60 ರಿಂದ 70 ವರ್ಷ ವಯಸ್ಕರ ಆರೋಗ್ಯವನ್ನೂ ಕಾಪಾಡುವುದು ಅಗತ್ಯ ಎಂದರು.


ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡವರು:
ಉದ್ಯಮಿ ಎಮ್.ಜಿ ರಫೀಕ್ ಅವರು ಮಾತನಾಡಿ ನನ್ನ ಎಲ್ಲಾ ಮಕ್ಕಳಿಗೂ ಡಾ. ಶ್ರೀಕಾಂತ್ ಅವರೇ ವೈದ್ಯರು. ಮಕ್ಕಳಿಗೆ ಏನು ತಿನ್ನಬೇಕು, ತಿನ್ನಬಾರದು ಎಂದು ಹೇಳುವ ಅವರ ಸೇವೆಯ ಸ್ಟೈಲೇ ಬೇರೆ. ವೈದ್ಯಕೀಯ ಸೇವೆಯೊಂದಿಗೆ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಒತ್ತಡದ ನಡುವೆಯೂ ರಾತ್ರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳಿಗೂ ಉಚಿತ ವೈದ್ಯಕೀಯ ಸೇವೆ ನೀಡುತ್ತಾರೆ. ಅಲ್ಲಿಯೂ ಅವರು ಸಮಾಜ ಸೇವೆ ನೀಡಿದ್ದಾರೆ ಎಂದರು.


ವೃತ್ತಿಯನ್ನು ಒಪ್ಪಿ, ಅಪ್ಪಿಕೊಂಡವರು:
ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಅವರು ಮಾತನಾಡಿ ವೈದ್ಯಕೀಯ ಸೇವೆ ಅತ್ಯಂತ ಶ್ರೇಷ್ಟ. ಈ ನಿಟ್ಟಿನಲ್ಲಿ ಡಾ. ಶ್ರೀಕಾಂತ್ ರಾವ್ ಅವರು ವೃತ್ತಿಯನ್ನು ಒಪ್ಪಿ, ಅಪ್ಪಿಕೊಂಡು ಅಪಾರ ಹೆಸರನ್ನು ಗಳಿಸಿದ್ದಾರೆ ಎಂದರು.


ಪೋನ್ ಮೂಲಕವೂ ತಕ್ಷಣ ಸ್ಪಂದಿಸುವ ಡಾಕ್ಟರ್:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಮಕ್ಕಳ ತಜ್ಞರಾಗಿರುವ ಡಾ. ಶ್ರೀಕಾಂತ್ ಅವರು ಸಾಮಾನ್ಯ ಜನರ ಪೋನ್‌ಗೂ ತಕ್ಷಣ ಸ್ಪಂದಿಸುತ್ತಾರೆ. ಇದು ನನ್ನ ಅನುಭವದ ಮಾತು. ಅವರ ಸೇವೆ ಹೆಚ್ಚಿನ ಮಕ್ಕಳಿಗೆ ಸಿಗುವ ಮೂಲಕ ಮಕ್ಕಳು ಆರೋಗ್ಯವಾಗಿರಲಿ ಎಂದು ಹೇಳಿದರು.


ಮಾತಿನಿಂದಲೇ ಪೋಷಕರಿಗೆ ಭರವಸೆ:
ಸ್ವಣೋದ್ಯಮಿ ಬಲರಾಮ ಆಚಾರ್ಯ ಅವರು ಮಾತನಾಡಿ ಡಾ. ಶ್ರೀಕಾಂತ್ ಅವರ ನೂತನ ಕ್ಲಿನಿಕ್‌ನಲ್ಲಿ ಬಂದಾಗ ಮಕ್ಕಳ ಮನಸ್ಸನ್ನು ಸೆಳೆಯಲು ಬೇರೆ ಬೇರೆ ಪೋಸ್ಟರ್ ಅನ್ನು ಗೋಡೆಯಲ್ಲಿ ಹಾಕಲಾಗಿದೆ. ಇದು ಮಕ್ಕಳ ಗಮನವನ್ನು ಬೇರೆಡೆಗೆ ಕೊಂಡೊಯ್ಯುವ ಮೂಲಕ ಇದು ಕೂಡಾ ಮಕ್ಕಳ ವೈದ್ಯಕೀಯ ವಿಭಾಗದ ಚಿಕಿತ್ಸೆಯೇ ಆಗಿದೆ. ನನ್ನ ಎಲ್ಲಾ ಮಕ್ಕಳಿಗೂ ಚಿಕಿತ್ಸೆ ಕೊಡಿಸಿದ್ದು ಡಾ. ಶ್ರೀಕಾಂತ್ ರಾವ್. ಅವರ ಮಾತಿನ ಸಲಹೆಯಿಂದ ಪೋಷಕರಿಗೆ ಭರವಸೆ ಮತ್ತು ಮಕ್ಕಳ ರೋಗ ಗುಣಮುಖ ಆಗುತ್ತದೆ ಎಂದರು.


ಡಾ.ಐ ಶ್ರೀಕಾಂತ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 1986ರ ಎಪ್ರಿಲ್ 13ಕ್ಕೆ ಪುತ್ತೂರಿನಲ್ಲಿ ಕ್ಲಿನಿಕ್ ಆರಂಭಿಸಿದ್ದೆವು. ನಾನು ಮೈಸೂರಿನಲ್ಲಿ ಮೆಡಿಕಲ್ ಮತ್ತು 3 ವರ್ಷ ಮುಂಬಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ ನನಗೆ ಒಳ್ಳೆಯ ಅನುಭವ ನೀಡಿದೆ. ಆದ್ದರಿಂದ ಪುತ್ತೂರಿನಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಯಿತು. ಸುಮಾರು 15 ವರ್ಷ ನಾವು ಸುಳ್ಯ ಸಹಿತ ಹಲವು ಕಡೆ ಹೋಗಿ ಚಿಕಿತ್ಸೆ ನೀಡುತ್ತಿದ್ದೆ. ಬಳಿಕ ಚೇತನ ಆಸ್ಪತ್ರೆ ಆರಂಭಿಸಿ, ಕಡಿಮೆ ದರದಲ್ಲಿ ಆದಷ್ಟು ಚಿಕಿತ್ಸೆ ನೀಡುವ ಮೂಲಕ ಸೇವೆ ನೀಡಲು ಆರಂಭಿಸಿದ್ದೇವು. ಆರಂಭದ 10 ವರ್ಷ ಪುತ್ತೂರಿನ ಹಿರಿಯ ವೈದ್ಯರಾದ ಡಾ. ಗೌರಿ ಪೈ ಮತ್ತು ಡಾ. ಪ್ರಸಾದ್ ಭಂಡಾರಿ ಅವರು ಪ್ರೋತ್ಸಾಹ ನೀಡಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶ್ರೀಕಾಂತ್ ರಾವ್ ಅವರ ಪತ್ನಿ ಡಾ. ನಂದಿತಾ, ಪುತ್ರ ನವನೀತ್ ರಾವ್, ಡಾ. ಶ್ರೀಕಾಂತ್ ರಾವ್ ಅವರ ತಾಯಿ ನಳಿನಿ ಪಿ ದಾರೇಶ್ವರ್, ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಡಾ. ನರಸಿಂಹ ಶರ್ಮ, ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಸುಬ್ರಹ್ಮಣ್ಯ, ಪುತ್ತೂರು ಪ್ರಗತಿ ಸ್ಪೆಷಾಲಟಿ ಅಸ್ಪತ್ರೆಯ ಅಧ್ಯಕ್ಷ ಡಾ. ಶ್ರೀಪತಿ ರಾವ್, ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್, ಡಾ.ಸುಲೇಖಾ ವರದರಾಜ್, ಬಿಜೆಪಿ ನಗರಮಂಡದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಕಟ್ಟಡದ ಮಾಲಕ ಹಮೀದ್, ಮಾಜಿ ಪುರಸಭೆ ನಿವೃತ್ತ ಆರೋಗ್ಯಾಧಿಕಾರಿ ಅಬೂಬಕ್ಕರ್, ಸುಬ್ರಹ್ಮಣ್ಯ ಭಟ್, ಎಮ್ ಜೆ ರೈ, ಎ ಜಗಜೀವನ್‌ದಾಸ್ ರೈ, ಜೈರಾಜ್ ಭಂಡಾರಿ, ನಿವೃತ್ತ ಪ್ರಾಂಶಪಾಲ ಝೇವಿಯರ್ ಡಿಸೋಜ, ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಆನಂದ್, ಪರಮೇಶ್ವರ ಗೌಡ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ, ರಫೀಕ್ ದರ್ಬೆ, ಅಬಕಾರಿ ಇಲಾಖೆಯ ಪ್ರೇಮಾನಂದ, ಪುತ್ತೂರು ಕೊಂಬೆಟ್ಟು ಶ್ರೀ ರಾಮಕೃಷ್ಣ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ, ಉದಯ ಹೆಚ್, ಸುಧೀರ್ ನೋಂಡಾ, ಪ್ರೀತಾ ಹೆಗ್ಡೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶ್ರೀಧರ್ ಮಂಜಲ್ಪಡ್ಪು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ನೂತನ ಕ್ಲಿನಿಕ್‌ನಲ್ಲಿ ಹಲವು ಸೌಲಭ್ಯ
40 ವರ್ಷದ ಸೇವಾ ಅನುಭವೊಂದಿಗೆ ಇವತ್ತು ಕ್ಲಿನಿಕ್ ಆರಂಭಿಸಿದ್ದೇನೆ. ಇಲ್ಲಿ ಚಿಕಿತ್ಸೆ ಮತ್ತು ಸಲಹೆ, ಔಷಧಿ, ಲ್ಯಾಬೋರೇಟರಿ, ಸ್ಕ್ಯಾನಿಂಗ್ ಮತ್ತು ತುರ್ತು ಡೇಕೇರ್ ಸೌಲಭ್ಯ ನೀಡಲಾಗಿದೆ. ಅಗತ್ಯವಿದ್ದಲ್ಲಿ ಚೇತನಾ ಅಥವಾ ಮಹಾವೀರ ಆಸ್ಪತ್ರೆಯಲ್ಲಿ ದಾಖಲಿಸುವ ಚಿಂತನೆ ಮಾಡಿದ್ದೇವೆ. ಕ್ಲಿನಿಕ್‌ನಲ್ಲಿ ನಾನು ಪ್ರತಿ ದಿನ ಬೆಳಗ್ಗೆ ಗಂಟೆ 9 ರಿಂದ ಮಧ್ಯಾಹ್ನ 2.30 ಮತ್ತು ಸಂಜೆ ಗಂಟೆ 4.30 ರಿಂದ ರಾತ್ರಿ 9.30ರ ತನಕ ಇರುತ್ತೇನೆ. ಮುಂಚಿತ ನೋಂದಾವಣೆ ಸಮಯ ಬೆಳಿಗ್ಗೆ ಗಂಟೆ 6 ರಿಂದ 11 ರ ತನಕ. ಹೆಚ್ಚಿನ ಮಾಹಿತಿಗಾಗಿ ಮೊ. 8088824648 ಮತ್ತು 8197529363 ಅನ್ನು ಸಂಪರ್ಕಿಸಿ
ಡಾ.ಐ ಶ್ರೀಕಾಂತ್ ರಾವ್


2-3 ತಿಂಗಳ ಮಕ್ಕಳ ಬಗ್ಗೆ ನಿಗಾ ಹೆಚ್ಚಿರಲಿ
ಕಳೆದೆರಡು ವರ್ಷಗಳಿಂದ 2-3, 5 ತಿಂಗಳ ಮಕ್ಕಳು ತಕ್ಷಣ ಸೀರಿಯಸ್ ಆಗುವ ಲಕ್ಷಣ ಕಂಡು ಬಂದಿದೆ. ಅವರಿಗೆ ಯಾವುದೇ ಖಾಯಿಲೆಯ ಲಕ್ಷಣ ಇರುವುದಿಲ್ಲ. ನಾವು ನೋಡುತ್ತಾ ಚಿಕಿತ್ಸೆ ಪ್ರಾರಂಭಿಸುವ ಮುಂದೆಯೇ ಮಗುವಿನ ಜೀವ ಹೋಗುವಂತಹ ಪರಿಸ್ಥಿತಿ. ಈ ಕುರಿತು ಆದಷ್ಟು ಮಗುವಿನ ಖಾಯಿಲೆ ಲಕ್ಷಣ ನೋಡಿ ತಕ್ಷಣ ಮಂಗಳೂರಿಗೆ ಕಳುಹಿಸಿದ ಮಕ್ಕಳು ಬದುಕಿದ್ದಾರೆ. ಹಾಗಾಗಿ ಸಣ್ಣ ಮಕ್ಕಳು ಬಂದಾಗ ಬಹಳ ಹೆದರಿಕೆ. ಯಾಕೆಂದರೆ ಪೋಷಕರಿಗೆ ನಮ್ಮ ಮೇಲೆ ಸಂಶಯ ಸಹಜ. ನಾವು ಕೂಡಾ ಏನು ಮಾಡುವುದು. ರೋಗದ ಚಿಹ್ನೆಯೇ ಗೊತ್ತಾಗುವುದಿಲ್ಲ. ಹಾಗಾಗಿ 2-3 ತಿಂಗಳ ಮಕ್ಕಳ ಬಗ್ಗೆ ಬಹಳಷ್ಟು ನಿಗಾ ವಹಿಸಿ ಎಂದು ಡಾ. ಐ ಶ್ರೀಕಾಂತ್ ರಾವ್ ಅವರು ಮಕ್ಕಳ ಪೋಷಕರಿಗೆ ಕಿವಿ ಮಾತನ್ನು ಹೇಳಿದರು.

LEAVE A REPLY

Please enter your comment!
Please enter your name here