ಗೌರವಾಧ್ಯಕ್ಷ- ಸೀತಾರಾಮ ರೈ, ಅಧ್ಯಕ್ಷ- ಪ್ರಭಾಕರ್ ಶೆಟ್ಟಿ, ಕಾರ್ಯದರ್ಶಿ- ಸತೀಶ್ ಬಲ್ಯಾಯ
ಪುತ್ತೂರು: 43 ನೇ ವರ್ಷದ ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯನ್ನು ಇತ್ತೀಚಿಗೆ ಸವಣೂರಿನ ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿದ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈ, ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ನಡುಬೈಲು, ಕಾರ್ಯದರ್ಶಿಯಾಗಿ ಸತೀಶ್ ಬಲ್ಯಾಯ ಕನ್ನಡಕುಮೇರು, ಉಪಾಧ್ಯಕ್ಷರುಗಳಾಗಿ ರಾಘವ ಗೌಡ ಸವಣೂರು ಹಾಗೂ ಬಾಲಚಂದ್ರ ರೈ ಕೆರೆಕ್ಕೋಡಿ, ಜತೆ ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ಕೋಡಿಬೈಲು ಹಾಗೂ ಕೋಶಾಧಿಕಾರಿ ರಾಮಕೃಷ್ಣ ಪ್ರಭು ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಸುಧಾಕರ್ ರೈ ದೇವಸ್ಯ, ರಾಜರಾಮ್ ಪ್ರಭು ಅಶ್ವಿನಿ ಫಾರ್ಮ್, ಚಂದ್ರಶೇಖರ್ ಪಿ, ಮೋಹನ್ ರೈ ಕೆರೆಕ್ಕೋಡಿ, ಗಂಗಾಧರ್ ಪೆರಿಯಡ್ಕ, ಕುಂಞ ಆರೇಲ್ತಡಿ, ಸುರೇಶ್ ಸರ್ವೆ, ವೆಂಕಪ್ಪ ಗೌಡ ಅಡೀಲು, ಕುಸುಮ ಪಿ.ಶೆಟ್ಟಿ ಕೆರೆಕ್ಕೋಡಿ, ಶಾರದಾ ಮಾಲೆತ್ತಾರು, ಜಯ ಬೇರಿಕೆ, ಗಂಗಾಧರ್ ಸುಣ್ಣಾಜೆ, ದಿವಾಕರ್ ಬಸ್ತಿ ಹಾಗೂ ಅನಿತಾ ಲಕ್ಷ್ಮಣ ಗೌಡ ಕೆಡೆಂಜಿರವರನ್ನು ಆಯ್ಕೆ ಮಾಡಲಾಗಿದೆ.