ಕೌಡಿಚ್ಚಾರಿನಲ್ಲಿ ಅಲೆಮಾರಿ ಜಾನುವಾರುಗಳ ಹಾವಳಿ- ಸಂಕಷ್ಟದಲ್ಲಿ ಸಾರ್ವಜನಿಕರು, ವಾಹನ ಸವಾರರು

0

ಪುತ್ತೂರು: ಅಲೆಮಾರಿ ಜಾನುವಾರುಗಳಿಂದಾಗಿ ಕೌಡಿಚ್ಚಾರಿನಲ್ಲಿ ಜನ ಸಂಕಷ್ಟ ಅನುಭವಿಸುವಂತಾಗಿದೆ.

ಕೌಡಿಚ್ಚಾರು ಪರಿಸರದಲ್ಲಿ ಸುಮಾರು ದಿನಗಳಿಂದ ಅಲೆಮಾರಿ ದನಗಳು ಓಡಾಡುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.

ಜಾನುವಾರುಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಟ ನಡೆಸುವುದರಿಂದ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here