ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಹಾಗೂ ಶಾಲಾ ವಿದ್ಯಾರ್ಥಿ ಸಂಸತ್ತಿನ ಪ್ರತಿಜ್ಞಾ ಸ್ವೀಕಾರ ಜು.೧೦ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸದಸ್ಯ ಎಮ್. ಸತೀಶ್ ಭಟ್‌ರವರು ಮಾತನಾಡಿ, ಗುರುವು ಜ್ಞಾನ ರೂಪೀ ದೀಪ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಶಿಕ್ಷಕಿ ಮಲ್ಲಿಕಾ ಅವರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಹೊಸ ಶಾಲಾ ವಿದ್ಯಾರ್ಥಿ ಸಂಸತ್‌ಗೆ ಶ್ರೀ ರಾಮಕು೦ಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್ ಪಿ.ರವರು ಪ್ರತಿಜ್ಞಾ ವಾಕ್ಯಗಳನ್ನು ಬೋಧಿಸಿದರು. ಪ್ರತಿಜ್ಞಾ ಸ್ವೀಕಾರದ ನಂತರ ನೂತನ ಅಧ್ಯಕ್ಷ ಗುಣ್ವಿತ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಶಿಸ್ತಿನೊಂದಿಗೆ ಶಾಲೆಯ ಪ್ರಗತಿಗೆ ತನ್ನ ತಂಡ ಕೊಡುಗೆ ನೀಡುವುದಾಗಿ ಭರವಸೆ ನೀಡಿದರು.
ಮಕ್ಕಳು ಗುರುವಿನ ಮಹತ್ವವನ್ನು ಒಳಗೊಂಡ ಕವನ ಪಠಣ, ಭಾಷಣ ಹಾಗೂ ಭಾವಗೀತೆಗಳೊಂದಿಗೆ ಕಾರ್ಯಕ್ರಮವನ್ನು ಮನೋಜ್ಞಗೊಳಿಸಿದರು. ಶಿಕ್ಷಕರಾದ ಶಿವಪ್ರಸಾದ್, ಪ್ರತೀಕ್ಷಾ ಆಳ್ವ, ಗೀತಾ ಕೆ, ಪಾರ್ವತಿ ಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪುಗೊಂಡಿತ್ತು. ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.