ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಗುರುಪೂರ್ಣಿಮಾ ಅಂಗವಾಗಿ ಗುರು ವಂದನಾ ದಿನ ಆಚರಣೆ ಮಾಡಲಾಯಿತು.
ವಿದ್ಯಾರ್ಥಿಗಳು ಗುರುಗಳಿಗೆ ನಮಿಸುವುದರ ಮೂಲಕ ಈ ದಿನಕ್ಕೆ ಅರ್ಥ ಕಲ್ಪಿಸಿಕೊಟ್ಟರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಮಾತನಾಡಿ ತಮಗೆ ವಿದ್ಯೆ ಕಲಿಸಿದ ಗುರುವನ್ನು ನೆನಪಿಸಿಕೊಂಡರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆಯಾದ ಎಸ್. ಪಿ. ರಝೀಯಾ ಮಾತಾಡಿ ಗುರುಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಹಿತವಚನ ನೀಡಿದರು.
ವೇದಿಕೆಯಲ್ಲಿ ಶೇಖ್ ಜಲಾಲುದ್ದೀನ್, ಮಮತಾ ಆರ್, ಚೇತನಾ ಜೈನ್, ವನಿತಾ ಶೆಟ್ಟಿ, ದಿವ್ಯ, ಚಂದ್ರಾವತಿ, ಅನ್ನಪೂರ್ಣೇಶ್ವರಿ,ಖುರ್ಷೀದ್, ನೂರ್ಜಹಾನ್, ಹಾಫಿಳಾ,ಸಪ್ನಾಝ್ ಮತ್ತಿತರರು ಉಪಸ್ಥಿತರಿದ್ದರು.
