ಪುತ್ತೂರಿನಲ್ಲಿ ಮ್ಯಾಜಿಕ್ಯೂಬ್ ಸ್ಟುಡಿಯೋ ಶುಭಾರಂಭ

0

ಸಿನಿ ವೀಕ್ಷಣೆಯೊಂದಿಗೆ ಪಾರ್ಟಿ ಮಾಡಲು ಬೆಸ್ಟ್ ಸ್ಟುಡಿಯೋ

ಪುತ್ತೂರು: ಬರ್ತ್‌ಡೇ ಸೆಲೆಬ್ರೇಷನ್, ಪಾರ್ಟಿ, ಫ್ಯಾಮಿಲಿ ಅಥವಾ ಫ್ರೆಂಡ್ಸ್ ಗೆಟ್ ಟುಗೆದರ್ ಸೇರಿದಂತೆ ಇನ್ನಿತರ ಸಂಭ್ರಮದ ಕ್ಷಣಗಳನ್ನು ಎಲ್‌ಇಡಿ ಪರದೆಯಲ್ಲಿ ಸಿನಿಮಾ ವೀಕ್ಷಿಸುತ್ತಾ ಸಂಭ್ರಮಾಚರಿಸಲು ಸೂಕ್ತ ಸ್ಥಳಾವಕಾಶವಿರುವ ಮ್ಯಾಜಿಕ್ಯೂಬ್ ಸ್ಟುಡಿಯೋ ಬೈಪಾಸ್ ರಸ್ತೆಯಲ್ಲಿರುವ ಬಪ್ಪಳಿಗೆ ಟವರ್‌ನ ಮೊದಲ ಮಹಡಿಯಲ್ಲಿ ಡಿ.10 ರಂದು ಶುಭಾರಂಭಗೊಂಡಿತು.


ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರಿಗೆ ಮ್ಯಾಜಿಕ್ಯೂಬ್ ಸ್ಟುಡಿಯೋ ದೊಡ್ಡ ಕೊಡುಗೆಯಾಗಿದೆ. 60-70 ಸಾವಿರ ಜನಸಂಖ್ಯೆ ಹೊಂದಿರುವ ಪುತ್ತೂರಿನಲ್ಲಿ ಹತ್ತಾರು ವ್ಯವಹಾರಗಳಿವೆ. ಈ ಸಾಲಿಗೆ ವಿನೂತನವಾಗಿ ಬರ್ತ್ ಡೇ ಇತ್ಯಾದಿ ಸಂಭ್ರಮದ ಕ್ಷಣಗಳನ್ನು ಆಚರಿಸಲೆಂದೇ ಪ್ರಾರಂಭಿಸಲಾದ ಮ್ಯಾಜಿಕ್ಯೂಬ್ ಸ್ಟುಡಿಯೋ ಸೇರಿದೆ ಎಂದು ಹೇಳಿ ಶುಭಹಾರೈಸಿದರು.


ಪುತ್ತಿಲ ಪರಿವಾರ ಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತೂರಿಗೆ ಏನ್ನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಮೋಹನ್ ದಂಪತಿ ಮ್ಯಾಜಿಕ್ಯೂಬ್ ಸ್ಟುಡಿಯೋ ಪ್ರಾರಂಭಿಸಿದ್ದು, ಅವರ ಕನಸು ಈಡೇರುವಂತಾಗಲಿ. ಇಂತಹ ಬೇರೆ ಬೇರೆ ಉದ್ಯಮಗಳನ್ನು ಪ್ರಾರಂಭಿಸುವಂತಾಗಲಿ ಎಂದು ಶುಭಹಾರೈಸಿದರು.
ಕೇಂದ್ರ ಅನ್ಸಾರುದ್ದೀನ್ ಜಮಾತ್ ಸಮಿತಿ ಪುತ್ತೂರು ಅಧ್ಯಕ್ಷ ಹಾಜಿ ಅಬ್ದುಲ್ ರಹಮಾನ್ ಮಾತನಾಡಿ, ಸಣ್ಣ ಕುಟುಂಬ ಬಂದು ಸಿನಿಮಾ ನೋಡುತ್ತಾ ಸಂಭ್ರಮಾಚರಿಸಲು ಇದು ಸಹಕಾರಿಯಾಗಲಿದೆ. ಇತರೆ ಕಡೆಗಳಲ್ಲೂ ಇದನ್ನೂ ಸ್ಥಾಪಿಸುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.


ವಿಜಯ ಸಾಮ್ರಾಟ್‌ನ ಸಹಜ್ ರೈ ಮಾತನಾಡಿ, ಆಧುನಿಕ ಸ್ಟುಡಿಯೋವನ್ನು ಪುತ್ತೂರಿಗೆ ಕೊಡುಗೆಯನ್ನಾಗಿ ನೀಡಿದ ಮೋಹನ್ ದಂಪತಿಗೆ ಧನ್ಯವಾದಗಳು. ಈ ಉದ್ಯಮವು ಇನ್ನಷ್ಟು ವಿಸ್ತಾರವಾಗಲಿ ಎಂದರು.


ಪುತ್ತೂರು ಒಕ್ಕಲಿಗ ಯುವಕ ಸಂಘದ ಅಧ್ಯಕ್ಷ ಅಮರನಾಥ್ ಗೌಡ ಮಾತನಾಡಿ, ನಮ್ಮ ಕಟ್ಟಡದಲ್ಲಿ ಹೊಸತನದ ಉದ್ಯಮಕ್ಕೆ ಅವಕಾಶ ನೀಡಬೇಕು ಎಂಬ ಆಲೋಚನೆಯೊಂದಿಗೆ ಎದುರು ನೋಡುತ್ತಿದ್ದೆ. ಅದರಂತೆ ಮೋಹನ್ ಅವರು ಬಂದು ಮ್ಯಾಜಿಕ್ಯೂಬ್ ಸ್ಟುಡಿಯೋದ ಬಗ್ಗೆ ತಿಳಿಸಿದಾಗ ಕೂಡಲೇ ಒಪ್ಪಿಕೊಂಡೆ. ಇವರ ಉದ್ಯಮಕ್ಕೆ ಶುಭವಾಗಲಿ ಎಂದರು.


ಕಟ್ಟಡ ಮಾಲಕ ಕಿಟ್ಟಣ್ಣಗೌಡ ಮಾತನಾಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕೃಪೆ ನಿಮ್ಮ ಮೇಲಿರಲಿದೆ. ಆತನ ಅನುಗ್ರಹದಿಂದ ನಿಮ್ಮ ಉದ್ಯಮವು ಎತ್ತರಕ್ಕೆ ಬೆಳೆಯಲಿ ಎಂದರು. ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಪ್ರಶಾಂತ್ ರೈ ಅವರು ಆಗಮಿಸಿ ಶುಭಹಾರೈಸಿದರು. ಸಿಜ್ಲರ್ ಗ್ರೂಪ್‌ನ ಪ್ರಸನ್ನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಮಯೂರಿ ಪ್ರಾರ್ಥಿಸಿದರು. ಶ್ರೇಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಮಾಲಕ ಮೋಹನ್ ವಂದಿಸಿದರು. ಮೋಹನ್ ಪತ್ನಿ ರೂಪಿಣಿ ಮತ್ತು ಸ್ನೇಹ ಬಳಗದವರು ಸಹಕರಿಸಿದರು.


ಬರ್ತ್‌ಡೇ ಸೆಲೆಬ್ರೇಷನ್, ಬ್ರೈಡ್ ಆಂಡ್ ಗ್ರೂಮ್ ಟು ಬಿ, ಮಾಮ್ ಆಂಡ್ ಡ್ಯಾಡ್ ಟು ಬಿ, ವಿವಾಹ ವಾರ್ಷಿಕೋತ್ಸವ, ಆಚಿವ್ಮೆಂಟ್ಸ್ ಸೆಲೆಬ್ರೇಶನ್, ಇಂಟರ್ವ್ಯೂವ್, ಬ್ರೊಡ್ಕಾಸ್ಟ್‌ಗಳ ಶೂಟಿಂಗ್, ಮೂವೀಸ್, ಮ್ಯೂಸಿಕ್ಸ್ ಹಾಗೂ ಸ್ಪೋಟ್ಸ್‌ಗಳ ವೀಕ್ಷಣೆ, ಫೋಟೋಶೂಟ್ಸ್, ವೀಡಿಯೋಗ್ರಫಿ, ಮಾಡೆಲ್ ಶೂಟ್, ಔಟ್ ಡೋರ್ ಇವೆಂಟ್ಸ್ ಶೂಟ್‌ಗೆ ಸ್ಥಳಾವಕಾಶ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 8861058445, 8722638510 ಸಂಪರ್ಕಿಸುವಂತೆ ಮಾಲಕ ಮೋಹನ್ ಮನವಿ ಮಾಡಿದರು.

LEAVE A REPLY

Please enter your comment!
Please enter your name here