ಕಾವು: ಮಾಡ್ನೂರು ಗ್ರಾಮದ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದಿಂದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಮಾಣಿಯಡ್ಕ ನಂದಾದೀಪ ನವೋದಯ ಸ್ವಸಹಾಯ ಸಂಘದ ಸದಸ್ಯೆ ವನಜಾಕ್ಷಿ ಮತ್ತು ಕೆರೆಮಾರು ಬ್ರಹ್ಮಶ್ರೀ ನವೋದಯ ಸ್ವಸಹಾಯ ಸಂಘದ ಸದಸ್ಯೆ ದಿವ್ಯಶ್ರೀರವರಿಗೆ ಕಾವು ನವೋದಯ ಒಕ್ಕೂಟದ ತುರ್ತುಪರಿಹಾರ ನಿಧಿಯಿಂದ ವೈದ್ಯಕೀಯ ನೆರವಿಗಾಗಿ ಸಹಾಯ ಧನ ನೀಡಲಾಯಿತು.
ನವೋದಯ ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಗೌರವಾಧ್ಯಕ್ಷ ಅಮ್ಮುಪೂಂಜ, ಮಾಜಿ ಅಧ್ಯಕ್ಷ ಚಿದಾನಂದ ಆಚಾರ್ಯ ಸಸ್ಪೆಟ್ಟಿ, ಕಾವು ವಲಯ ಪ್ರೇರಕಿ ಮಾಧವಿರವರು ಸದಸ್ಯರ ಮನೆಗೆ ಭೇಟಿ ನೀಡಿ ಸಹಾಯಧನ ವಿತರಿಸಿದರು.