ಎನ್.ಹೆಚ್ 75ದಾಟಿ ಪಂಜ ಸುಬ್ರಮಣ್ಯ ಸುರಕ್ಷಿತಾರಣ್ಯದತ್ತ ಜೋಡಿ ಕಾಡಾನೆಗಳು
ಧರ್ಮಸ್ಥಳ -ಪೆರಿಯಾಶಾಂತಿ -ಸುಬ್ರಮಣ್ಯ ರಸ್ತೆ ಬದಿ ಇರುವ ಫುಲ್ ಜಾರ್ -ಬಿಸಿ ಜೋಳದ ಅಂಗಡಿಗಳನ್ನು ಶೀಘ್ರ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಖಡಕ್ ಸೂಚನೆ
ಕೊಕ್ಕಡ: ಆನೆ ಡ್ರೈವ್ ಕಾರ್ಯಾಚರಣೆ 3ನೇ ದಿನಕ್ಕೆ ಮುಂದುವರಿದಿದ್ದು, ಮೊದಲನೇ ದಿನ ಕಾಫಿನಬಾಗಿಲು ಅರಣ್ಯದಲ್ಲಿದ್ದ ಕಾಡಾನೆಯನ್ನು ಎಲಿಫೆಂಟ್ ಡ್ರೈವ್ ಎಕ್ಸ್ಪರ್ಟ್ (ದುಬಾರೆ ಆನೆ ಕ್ಯಾಂಪ್ ನ ಮಾವುತರ) ಸಹಾಯದೊಂದಿಗೆ ಡ್ರೈವ್ ಮಾಡುತ್ತಿದ್ದೂ ಎರಡನೇ ದಿನ ಪೆರಿಯಾಶಾಂತಿ ಲಾವತ್ತಡ್ಕ ಭಾಗದಲ್ಲಿ ಇದ್ದ ಆನೆಯನ್ನು ಎನ್.ಹೆಚ್ 75 ಕ್ರಾಸ್ ಮಾಡಿಸಿ ಪಂಜ -ಸುಬ್ರಮಣ್ಯ ಸುರಕ್ಷಿತಾರಣ್ಯ ಕಡೆ ಡ್ರೈವ್ ಮಾಡಿ ಪುಷ್ಪ ಗಿರಿ ಕಾಡಿಗೆ ಬಿಡುವ ಪ್ರಯತ್ನ ನಡೆಯುತ್ತಿದೆ.

ಎರಡನೇ ದಿನ -ಪೆರಿಯಾಶಾಂತಿ -ಸುಬ್ರಮಣ್ಯ ರಸ್ತೆ ಬದಿ ಇರುವ ಫುಲ್ ಜಾರ್ ಅಂಗಡಿಯವರು ಬಿಸಾಕಿರುವ ಜೋಳದ ವೆಸ್ಟ್ ಗಳನ್ನು ತಿಂದು ರಸ್ತೆ ಬದಿ ಆನೆ ಲದ್ದಿ ಹಾಕಿದ್ದು, ಅರಣ್ಯ ಇಲಾಖೆಯವರ ಗಮನಕ್ಕೆ ಬಂದಿದ್ದು ಆನೆಗೆ ಆಹಾರ ಇಲ್ಲಿಯೇ ಸಿಗುತ್ತೆ ಎಂದಾದರೆ ಅದು ಅರಣ್ಯದ ಕಡೆ ಹೋಗಲು ಹಿಂದೇಟು ಹಾಕುತ್ತದೆ ಅಥವಾ ಬೇರೆ ಕಡೆ ಇದ್ದ ಆನೆಗಳು ಈ ಭಾಗಕ್ಕೆ ಬರಬಹುದು ಈ ಹಿನ್ನೆಲೆಯಲ್ಲಿ ಶೀಘ್ರವೇ ಫುಲ್ ಜಾರ್ ಮತ್ತು ಬಿಸಿ ಜೋಳದ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಎ.ಸಿ.ಎಫ್ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಎ.ಸಿ.ಎಫ್ ಹಸ್ತ ಶೆಟ್ಟಿ, ಆರ್.ಎಫ್.ಓ ರಾಘವೇಂದ್ರ ಅವರು ತಿಳಿಸಿದ್ದಾರೆ.