ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ಆಷಾಡ ಆಚರಣೆ

0

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ (ರಿ) ಪುತ್ತೂರು ಇದರ ಶ್ರೀ ಸರಸ್ವತಿ ಮಹಿಳಾ ಮಂಡಳಿಯ ವತಿಯಿಂದ “ಆಷಾಡದಲ್ಲಿ ಒಂದು ದಿನ ” ಕಾರ್ಯಕ್ರಮವು ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು.

ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಜಯಂತಿ ನಾಯಕ್ ಪುಂಡಿಕಾಯಿ ಮಾತನಾಡಿ ಆಷಾಡ ತಿಂಗಳ ಆಚರಣೆ ಹಾಗೂ ಆಷಾಡ ಮಾಸದಲ್ಲಿ ತಯಾರಿಸುವ ವಿವಿಧ ಖಾದ್ಯಗಳ ಬಗ್ಗೆ ತಿಳಿಸಿಕೊಟ್ಟರು. ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ನಿರ್ದೇಶಕರಾದ, ನಿವೃತ್ತ ಶಿಕ್ಷಕ ಶಂಕರ ನಾಯಕ್ ಆಜೇರು , ವಿಷ್ಣುಪ್ರಭು ಕರಿಂಬಿಲ ಹಾಗೂ ಪುರೋಹಿತ ಚಂದ್ರಶೇಖರ ಭಟ್ ಮುಂಡುಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಹಾರೈಸಿದರು.


ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರಂಜಿತಾ ಪ್ರಭು ಗೋಳಿತ್ತಡಿ ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.ಕು.ಮಲ್ಲಿಕಾ ಕುಕ್ಕಾಡಿ ಕಾರ್ಯಕ್ರಮ‌ ನಿರೂಪಿಸಿದರು .
ಆಷಾಡದ ವಿವಿಧ ಖಾದ್ಯಗಳ ಪ್ರದರ್ಶನ, ಪತ್ರೊಡೆ, ಗೋಳಿಬಜೆ, ಅರಿಶಿನ ಎಲೆಯ ಗಟ್ಟಿ, ಹಲಸಿನ ಕಾಯಿ ಪಲ್ಯ, ಚಟ್ನಿ, ಮಾವಿನಕಾಯಿ ಚಟ್ನಿ, ಸೊಪ್ಪಿನ ಪಲ್ಯ, ಖನಿಲೆ, ರಾಗಿ ಪಾಯಸ ಇನ್ನೂ ಹಲವು ಖಾದ್ಯಗಳನ್ನು ಮಹಿಳಾ ಮಂಡಳಿಯ ಸದಸ್ಯರು ಸ್ವತ:ತಾವೇ ತಯಾರಿಸಿ ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here