ಪ್ರೀತಿ-ಮಮತೆ ವಾತ್ಸಲ್ಯದ ಸ್ವಾಭಿಮಾನಿ ಬದುಕು ಸಾಗಿಸಿದವರು-ಪುರುಷೋತ್ತಮ ಭಂಡಾರಿ ಅಡ್ಯಾರ್
ಪುತ್ತೂರು: ಮೇನಾಲ ಏಳ್ನಾಡುಗುತ್ತು ದಿ.ಜಲಧರ ಶೆಟ್ಟಿರವರ ಪತ್ನಿ ಮದ್ವ ದಬೇಲಿಗುತ್ತು ಸರೋಜಿನಿ ಜೆ.ಶೆಟ್ಟಿರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಅಡ್ಯಾರ್ ಗಾರ್ಡನ್ ವಿ.ಕೆ.ಶೆಟ್ಟಿ ಸಭಾಭವನದಲ್ಲಿ ಜು.20ರಂದು ಜರಗಿತು.

ಪುರುಷೋತ್ತಮ ಭಂಡಾರಿ ಅಡ್ಯಾರ್ ನುಡಿನಮನ ಸಲ್ಲಿಸಿ ಸರೋಜಿನಿ ಶೆಟ್ಟಿಯವರು ಕುಟುಂಬ ಮತ್ತು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ಅವರು ತಮ್ಮ ಜೀವನದಲ್ಲಿ ಆದರ್ಶ ಬದುಕನ್ನು ಸಾಗಿಸಿದ್ದಾರೆ, 2024-25ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪ್ರೀತಿ-ಮಮತೆ ವಾತ್ಸಲ್ಯದ ಸ್ವಾಭಿಮಾನಿ ಬದುಕನ್ನು ಸಾಗಿಸಿದ ಸರೋಜನಿ ಶೆಟ್ಟಿಯವರ ನೆನಪು ಸದಾ ಅಮರ ಎಂದು ಹೇಳಿದರು. ಮೊಮ್ಮಗ ಶ್ರುತನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಮೊಮ್ಮಗಳು ನಿಧಿ ಎಸ್. ಶೆಟ್ಟಿ ಕವನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಸಂಜೀವ ಮಠಂದೂರು, ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ತಶಾಂತ್ ಪಕ್ಕಳ, ಶಿವರಾಮ ಆಳ್ವ ಕುರಿಯ, ಅನಿತಾ ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ರೈ ಅನಾಜೆ, ಸವಣೂರುಗುತ್ತು ವಿಶ್ವಜೀತ್ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ರಂಗನಾಥ ರೈ ಗುತ್ತು, ಬಾಲಕೃಷ್ಣ ರೈ ಮುಗೆರೋಡಿ, ಅರಿಯಡ್ಕ ಚಿಕ್ಕಪ್ಪ ನಾಕ್, ನ್ಯಾಯವಾದಿ ಅಶ್ವಿನ್ ಕುಮಾರ್ ರೈ, ಅಜಿತ್ ರೈ ಹೊಸಮನೆ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಎಸ್.ಬಿ.ಜಯರಾಮ ರೈ, ಶ್ರೀರಾಮ್ ಪಕ್ಕಳ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಶಿಧರ್ ಹೆಗ್ಡೆ, ಕುಮಾರನಾಥ ರೈ ಕರ್ನೂರುಭಾವ, ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಸುಪ್ರೀತ್ ರೈ ಖಂಡಿಗ, ಸುರೇಂದ್ರ ರೈ ಬಳ್ಳಮಜಲು, ಎನ್. ಚಂದ್ರಹಾಸ್ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಚಂದ್ರಹಾಸ್ ಶೆಟ್ಟಿ ರಂಗೋಲಿ, ಭಾಸ್ಕರ್ ರೈ ಕುಕ್ಜುವಳ್ಳಿ, ಹರಿಕೃಷ್ಣ ಬಂಟ್ವಾಳ್, ಸುಭಾಸ್ ರೈ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಭಂಡಾರಿ, ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ಸಾವಿರಾರು ಮಂದಿ ಭಾಗವಹಿಸಿದರು.
ಮೃತರ ಸಹೋದರರಾದ ಅಮರನಾಥ ರೈ, ಮಂಜುನಾಥ್ ರೈ ಮಡ್ವ ದೆಬ್ಬೇಲಿಗುತ್ತು, ಮಕ್ಕಳಾದ ಕಿಶನ್ ಜಲಧರ ಶೆಟ್ಟಿ, ಭಾರತಿ ಸುಭಾಶ್ಚಂದ್ರ ಶೆಟ್ಟಿ, ಆರತಿ ವಿನಯ್ ಶೆಟ್ಟಿ, ಸೊಸೆ ವಂದನ ಕಿಶನ್ ಶೆಟ್ಟಿ, ಅಳಿಯಂದಿರಾದ ಸುಭಾಶ್ಚಂದ್ರ ಶೆಟ್ಟಿ, ವಿನಯ್ ಶೆಟ್ಟಿ, ಮೊಮ್ಮಕಳಾದ ಶಶಾಂಕ್ ಕೆ. ಶೆಟ್ಟಿ, ವೈಶಾಕ್ ಕೆ. ಶೆಟ್ಟಿ, ನಿಧಿ ಎಸ್. ಶೆಟ್ಟಿ, ಸನ್ನಿಧಿ ಎಸ್. ಶೆಟ್ಟಿ ಶ್ರುತನ್ ವಿ. ಶೆಟ್ಟಿ ಮಡ್ವ ದೆಬ್ಬೇಲಿಗುತ್ತು ಮತ್ತು ಮೇನಾಲ ಏಳ್ನಾಡುಗುತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.