ಪುತ್ತೂರು: ಕೆದಂಬಾಡಿ ಗ್ರಾಮದ ಕುಕ್ಕುಂಜೋಡು ನಿವಾಸಿ ಕೋರಿಕ್ಕಾರು ದಿ.ಶೇಷಪ್ಪ ರೈ ಅವರ ಪತ್ನಿ ಕುಕ್ಕುಂಜೋಡು ತುಂಗಮ್ಮ ರೈ (95ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.20ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಪ್ರಮೋದ್ ಕುಮಾರ್ ರೈ, ರಮೇಶ್ ರೈ, ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಭಾರತೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಮಹಾಬಲ ರೈ ಕುಕ್ಕುಂಜೋಡು, ಪುತ್ರಿಯರಾದ ಮಮತಾ ರೈ, ಸುಧಾ ರೈ,ಮಲ್ಲಿಕಾ ರೈ, ಅಳಿಯಂದಿರಾದ ರಘುನಾಥ ರೈ, ಬಾಲಕೃಷ್ಣ ರೈ,ಅಶ್ವತ್ಥ್ ರೈ, ಸೊಸೆಯಂದಿರಾದ ಆಶಾಲತಾ ರೈ, ನಳಿನಿ ರೈ, ವಿದ್ಯಾ ಎಸ್ ರೈ, ಜಯಲಕ್ಷ್ಮೀ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.