ಆತೂರು,ಜು,20: ಎಸ್ಸೆಸ್ಸೆಫ್ಫ್ ಆತೂರು ಸೆಕ್ಟರ್ ಇದರ ವತಿಯಿಂದ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ಫ್ ಬ್ಲಡ್ ಸೈಬೋ ಇದರ 362ನೇ ರಕ್ತದಾನ ಶಿಬಿರ ಇಲ್ಲಿನ ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ರಕ್ತದಾನ ಮಹಾ ದಾನವಾಗಿದೆ.ಕಳೆದ ಹಲವಾರು ವರ್ಷಗಳಿಂದ ಎಸ್ಸೆಸ್ಸೆಫ್ಫ್ ರೋಗಿಗಳ ಪಾಲಿಗೆ ಬೆಳಕಾಗುತ್ತಲಿದೆ. ರಕ್ತದೊತ್ತಡ ರಾಜ್ಯದಾದ್ಯಂತ ತೀವ್ರವಾಗಿರುವಾಗ ನಮಗೆಲ್ಲರಿಗೂ ಬ್ಲಡ್ ಸೈಬೋ ಮೇಲೆ ನಿರೀಕ್ಷೆ ಮತ್ತು ಭರವಸೆಯಿದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೋರ್ಡಿನೇಟರ್ ಪ್ರವೀಣ್ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರದಲ್ಲಿ ಸುಮಾರು 52 ಮಂದಿ ಸ್ವ ಇಚ್ಛೆಯಿಂದ ರಕ್ತದಾನ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮಾದಕದ್ರವ್ಯ ವಿರುದ್ದ ಪ್ರತಿಜ್ಞೆ ಮತ್ತು ಕರಪತ್ರ ವಿತರಣೆ ಮಾಡಲಾಯಿತು. ಸುನ್ನೀ ಕೋರ್ಡಿನೇಷನ್ ಆತೂರು ಇದರ ಕೋಶಾಧಿಕಾರಿ ರಝಾಕ್ ನೇರಂಕಿ ಅಧ್ಯಕ್ಷತೆಯಲ್ಲಿ ನಡೆದ ಶಿಬರವನ್ನು ಅಬೂಬಕ್ಕರ್ ಸಅದಿ ಮಜೂರು ಉದ್ಘಾಟಿಸಿದು.ಕಾರ್ಯಾಕ್ರಮದಲ್ಲಿ ಡಿ.ಎ ಅಬೂಬಕ್ಕರ್ ಹಾಜಿ,ಅಬ್ದುಲ್ಲಕುಂಞಿ ಆಲಂಕಾರು,ಇಬ್ರಾಹಿಂ ಹಾಜಿ ಕೂದ್ಲುರು,ವೈ ಇಬ್ರಾಹಿಂ,ಅಬ್ಬಾಸ್ ಮಿಸ್ಬಾಹಿ,ಮಅ್ ರೂಫ್ ಸುಲ್ತಾನಿ, ಮುಂತಾದವರು ಉಪಸ್ಥಿತರಿದ್ದರು.