ಕೂರೇಲು ಸಮೃದ್ಧಿ ನಿಲಯದಲ್ಲಿ ನವಗ್ರಹ ಶಾಂತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ

0

ಸರಸ್ವತಿ ನಿಲಯದ ಗೃಹ ಪ್ರವೇಶ, ಮಲರಾಯ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಸಮೃದ್ಧಿ ನಿಲಯದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ನವಗ್ರಹ ಶಾಂತಿ ಹೋಮ, ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನ.04 ರಂದು ನಡೆಯಿತು.

ನ.3 ರಂದು ಕೂರೇಲುವಿನಲ್ಲಿ ನೂತನವಾಗಿ ನಿರ್ಮಿಸಿದ `ಸರಸ್ವತಿ ನಿಲಯ’ ದ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ವಾಸ್ತು ಹೋಮ, ವಾಸ್ತು ಪೂಜಾ ಬಲಿ, ರಾಕ್ಷೆಘ್ನ ಹೋಮ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಮನೆಯ ಗೃಹ ಪ್ರವೇಶ ನಡೆಯಿತು. ನ.೪ ರಂದು ಕೂರೇಲು ಸಮೃದ್ಧಿ ನಿಲಯದಲ್ಲಿ ಪ್ರಾರ್ಥನೆ, ಸ್ಥಳ ಶುದ್ಧಿ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆದು ಗಣಪತಿ ಹೋಮ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನವಗ್ರಹ ಶಾಂತಿ ಹೋಮ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಕೂರೇಲು ತರವಾಡು ಮನೆಯ ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು ಆಗಮಿಸಿ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು. ಕೂರೇಲು ಸಮೃದ್ಧಿ ಮನೆಯ ಯಜಮಾನ, ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು ಉಪಸ್ಥಿತರಿದ್ದರು.


ನೇಮೋತ್ಸವಕ್ಕೆ ಗೊನೆ ಮುಹೂರ್ತ

ವಿಶೇಷ ಕಾರಣಿಕ ಶಕ್ತಿಯನ್ನು ಹೊಂದಿರುವ ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಕೂರೇಲು ಮಲರಾಯ ದೈವಸ್ಥಾನದ ಕೂರೇಲು ಶ್ರೀ ಮಲರಾಯ ದೈವಗಳ ನೇಮೋತ್ಸವವು ನ.11 ಮತ್ತು 12ರಂದು ವಿಜೃಂಭಣೆಯಿಂದ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ನೇಮೋತ್ಸವಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮ ನ.04 ರಂದು ನಡೆಯಿತು.

LEAVE A REPLY

Please enter your comment!
Please enter your name here