ಪುರುಷರಕಟ್ಟೆ: ಸರಸ್ವತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ವನಮಹೋತ್ಸವ ಆಚರಣೆ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಇವರ ನೇತೃತ್ವದಲ್ಲಿ ಪುರುಷರಕಟ್ಟೆಯ ಸರಸ್ವತಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಜು.19ರಂದು ಆಚರಿಸಲಾಯಿತು.

ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಲಯನ್ಸ್ ಅಧ್ಯಕ್ಷರಾದ Ln. ಪ್ರೇಮಲತಾ ರಾವ್ ಹಾಗೂ ಕಾರ್ಯದರ್ಶಿ Ln. ಅರವಿಂದ ಭಗವಾನ್ ಭಾಗವಹಿಸಿದ್ದರು. ಕೋಶಾಧಿಕಾರಿ Ln. ಸುಧಾಕರ್, Ln. ವತ್ಸಲಾ ರಾಜ್ಞಿ, Ln. I ಜಯಶ್ರೀ ಶೆಟ್ಟಿ, Ln. ನಯನಾ ರೈ, ರಂಗನಾಥ ರಾವ್, ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರ ತೀರ್ಥರಾಮ ಸವಣೂರು, ಶಿಕ್ಷಣ ಸಂಯೋಜಕರಾದ ಶ್ರೀಲಕ್ಷ್ಮೀ ಮೊಳೆಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿವಿಧ ತಳಿಗಳ ಹಣ್ಣು ಮತ್ತು ಹೂವಿನ ಗಿಡಗಳನ್ನು ಶಾಲೆಗೆ ಹಸ್ತಾಂತರ ಮಾಡಲಾಯಿತು. ನಂತರ ಶಾಲಾ ಸ್ಕೌಟ್ ಮತ್ತು ಗೈಡ್ಸ್ ಘಟಕದ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯಗುರು ಅಖಿಲಾ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಕು. ಧನುಷಾ ಟಿ ಮತ್ತು ದೀಪಿಕಾ ಪ್ರಾರ್ಥನೆ ಗೈದರು. ಶಿಕ್ಷಕಿ ಮಧುಶ್ರೀ ವಂದಿಸಿ, ಸುಧಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here