ಚಾಪಲ್ಲ ಬಸ್ ತಂಗುದಾಣದಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

0

ಸವಣೂರು : ಸವಣೂರು ಸಮೀಪದ ಚಾಪಲ್ಲ ಎಂಬಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.20 ರಂದು ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡವರನ್ನು ಪೆರುವಾಜೆ ಗ್ರಾಮದ ಕಾನಾವು ಪುಳಿತ್ತಡಿ ನಿವಾಸಿ ಬೆಳಿಯಪ್ಪ ಗೌಡ (70ವ.) ಎಂದು ಗುರುತಿಸಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ವಿಜಯ, ಪುತ್ರರಾದ ನಿತ್ಯಪ್ರಸಾದ್, ಪ್ರಶಾಂತ್,ತಾರಾನಾಥ ಹಾಗೂ ಪುತ್ರಿ ಪ್ರಮೀಳಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here