ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣ –  ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಪುತ್ತೂರು ನ್ಯಾಯಾಲಯ

0

ಪುತ್ತೂರು: 4 ವರ್ಷಗಳ ಹಿಂದೆ ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿಗಳಿಗೆ ಪುತ್ತೂರು‌ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2021 ರ ಮಾ 1 ರಂದು ಆರೋಪಿಗಳಾದ ಆಶಾ ಮತ್ತು  ಬೇಬಿ ಡಿಸೋಜ ರವರು ಪೊಲೀಸ್ ಉಪನಿರೀಕ್ಷಕರ ಕೊಠಡಿಯಲ್ಲಿ ಅರ್ಜಿ ವಿಚಾರಣೆ ನಡೆಸುತ್ತಿರುವ ಸಮಯ ಆರೋಪಿಗಳಿಗೂ ಮತ್ತು ಚಿಕ್ಕ ಮುಡ್ನೂರು  ಗ್ರಾಮದ ಲಾರೆನ್ಸ್ ಡಿಸೋಜ ರವರ ಮಧ್ಯೆ  ಗಲಾಟೆ ನಡೆಯುತ್ತಿರುವ ಸಮಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಸೇಸಮ್ಮ  ಕೆ ಎಸ್ ರವರು ಗಲಾಟೆ ಬಿಡಿಸಲು ಮಧ್ಯ ಬಂದಾಗ ಆರೋಪಿಗಳು ಏಕಾ ಏಕಿ ಉಪನಿರೀಕ್ಷಕರಿಗೆ  ಕೈಯಿಂದ ಹಲ್ಲೆ ಮಾಡಿ ಅವರು ಧರಿಸಿದ್ದ ಸಮವಸ್ತ್ರವನ್ನು ಹರಿದು ಸಮವಸ್ತ್ರಕ್ಕೆ ಅಳವಡಿಸಿದ ನಾಮಫಲಕವನ್ನು ಕಿತ್ತುಹಾಕಿ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಾಧ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಾಲ್ ನಾಯಕ್  ಆರೋಪಿಗಳಿಬ್ಬರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಎ ಸಿ ಜೆ ಎಂ ನ್ಯಾಯಾಲಯದ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ್ ರವರು ಆರೋಪಿಗಳ ಮೇಲೆ ಆರೋಪ ಸಾಬೀತಾಗಿದೆ ಎಂದು ಶಿಕ್ಷೆಯನ್ನು ವಿಧಿಸಿರುತ್ತಾರೆ. ಸರ್ಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ  ಕವಿತಾ ಕೆ ರವರು ವಾದಿಸಿರುತ್ತಾರೆ. 

LEAVE A REPLY

Please enter your comment!
Please enter your name here