ಪುತ್ತೂರು: ಈಶ್ವರಮಂಗಲ ಪೇಟೆಯ ಅನತಿ ದೂರದಲ್ಲಿ ರಸ್ತೆಯಲ್ಲೇ ನಿರ್ಮಾಣವಾಗಿದ್ದ ಬೃಹದಾಕಾರದ ಗುಂಡಿಯನ್ನು ಲೋಕೋಪಯೋಗಿ ಇಲಾಖೆಯವರು ಜು.23ರಂದು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿರುವ ರಸ್ತೆಯಲ್ಲಿ ಬೃಹದಾಕಾರದ ಗುಂಡಿ ನಿರ್ಮಾಣ ಆಗಿರುವ ಬಗ್ಗೆ ಸುದ್ದಿ ಪತ್ರಿಕೆ ಮತ್ತು ಸುದ್ದಿ ವೆಬ್ಸೈಟ್ ಜು.23ರಂದು ವರದಿ ಪ್ರಕಟಿಸಿ ಅಪಾಯದ ಬಗ್ಗೆ ಎಚ್ಚರಿಸಿತ್ತು. ವರದಿ ಪ್ರಕಟಗೊಂಡಲ್ಲೇ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಲೋಕೋಪಯೋಗಿ ಇಲಾಖೆ ಗುಂಡಿ ಮುಚ್ಚಿಸುವ ಕಾರ್ಯ ನಡೆಸಿದ್ದು, ಇವರ ಕಾರ್ಯಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
ರಸ್ತೆಯಲ್ಲೇ ಗುಂಡಿ ನಿರ್ಮಾಣ ವಿಚಾರದ ಬಗ್ಗೆ ನಾನು ಸಂಬಂಧಪಟ್ಟವರಿಗೆ ತಿಳಿಸುವ ಕಾರ್ಯ ಮಾಡಿದ್ದೆ, ಆದರೆ ಸುದ್ದಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಇಲಾಖೆಯವರು ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ, ಗುಂಡಿ ಮುಚ್ಚಿದ ಪಿಡಬ್ಲ್ಯೂಡಿ ಇಲಾಖೆಗೂ, ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದ ಸುದ್ದಿ ಪತ್ರಿಕೆಗೂ ನೆ.ಮುಡ್ನೂರು ಗ್ರಾ.ಪಂ ಪರವಾಗಿ ಸದಸ್ಯ ಇಬ್ರಾಹಿಂ ಪಳ್ಳತ್ತೂರು ಅಭಿನಂದನೆ ಸಲ್ಲಿಸಿದ್ದಾರೆ.