ನೆಲ್ಲಿಕಟ್ಟೆ: ಏಕಮುಖ ರಸ್ತೆಯಲ್ಲಿ ಪೊಲೀಸ್ ನಾಮಫಲಕವಿದ್ದ ಕಂಟೈನರ್‌ ಸಂಚಾರ ; ರಸ್ತೆ ಬ್ಲಾಕ್ !

0

ಬಸ್, ರಿಕ್ಷಾ ಡಿಕ್ಕಿ- ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ವಿದ್ಯಾರ್ಥಿಗಳ ಪರದಾಟ

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತೆರಳುವ ನೆಲ್ಲಿಕಟ್ಟೆ ಏಕಮುಖ ರಸ್ತೆಯಲ್ಲಿ ಪೊಲೀಸ್ ನಾಮಫಲಕವಿದ್ದ ಕಂಟೈನರ್‌ವೊಂದು ವಿರುದ್ಧ ದಿಕ್ಕಿನಿಂದ ಬಂದ ಹಿನ್ನಲೆ ಬಸ್‌ ನಿಲ್ದಾಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಿಯಾಗಿ ರಸ್ತೆ ಸಂಚಾರ ಬ್ಲಾಕ್ ಆದ ಮತ್ತು ಬಸ್ ಸ್ವಲ್ಪ ಹಿಂದಕ್ಕೆ ಚಲಿಸಿದಾಗ ರಿಕ್ಷಾಕ್ಕೆ ಡಿಕ್ಕಿಯಾದ ಹಾಗೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ವಿದ್ಯಾರ್ಥಿಗಳು ಜಡಿ ಮಳೆಯಲ್ಲಿ ಪರದಾಡಿದ ಘಟನೆ ಜು.23ರಂದು ಪುತ್ತೂರು ನೆಲ್ಲಿಕಟ್ಟೆ ಸುದ್ದಿ ಬಿಡುಗಡೆ ಪತ್ರಿಕಾ ಕಾರ್ಯಾಲಯದ ಮುಂಭಾಗ ನಡೆದಿದೆ.


ಕೆ.ಎಸ್.ಆರ್.ಟಿ.ಸಿ ಬಸ್ ಎಂದಿನಂತೆ ಏಕಮುಖ ರಸ್ತೆಯಲ್ಲಿ ಬಸ್‌ನಿಲ್ದಾಣಕ್ಕೆ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಇಳಿಮುಖವಾಗಿ ಬಂದ ಕಂಟೈನರ್ ಲಾರಿಯಿಂದಾಗಿ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಬಸ್ ಏರು ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಪುನಃ ಮುಂದೆ ಚಲಿಸುವಾಗ ಸಾಮಾನ್ಯವಾಗಿ ಸ್ವಲ್ಪ ಹಿಂದಕ್ಕೆ ಬರುತ್ತದೆ. ಇದೇ ವೇಳೆ ಬಸ್‌ನ ಹಿಂಬದಿಯಲ್ಲಿ ಆಟೋ ರಿಕ್ಷಾವಿದ್ದ ಕಾರಣ ಬಸ್ ಹಿಂದಕ್ಕೆ ಚಲಿಸಿದಾಗ ರಿಕ್ಷಾಕ್ಕೆ ತಾಗಿದೆ. ಇದು ಗೊಂದಲಕ್ಕೆ ಕಾರಣವಾಗಿತ್ತದಲ್ಲದೆ. ರಸ್ತೆ ಸಂಚಾರ ಬ್ಲಾಕ್ ಆಗಿತ್ತು. ಇದೆ ಸಮಯ ಶಾಲಾ ಕಾಲೇಜು ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ರಸ್ತೆ ಮಧ್ಯೆ ಸ್ವಲ್ಪ ಹೊತ್ತು ಬಾಕಿಯಾದರು. ಕೊನೆಗೆ ರಿಕ್ಷಾವನ್ನು ಹಿಂದಕ್ಕೆ ತಂದು ಕೆಲವರು ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆಯ ಸೇವೆಯನ್ನು ನೀಡಿದರು.

LEAVE A REPLY

Please enter your comment!
Please enter your name here