ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ಆಂಬುಲೆನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಹೊನ್ನಪ್ಪ ದೇವರಗದ್ದೆ ಅವರ ಶವ ಜು.25ರಂದು ಪತ್ತೆಯಾಗಿದೆ.ಅವರು ಜು.22ರಂದು ನಾಪತ್ತೆಯಾಗಿದ್ದರು.

ಘಟನೆಯ ಬಗ್ಗೆ ಅವರ ಪತ್ನಿ ಪ್ರೇಮ ಅವರ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಅವರು ಹೊಳೆ ಬದಿ ತೆರಳಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಲೀಸರು ಹಾಗೂ ಸ್ಥಳೀಯರು ಮೂರು ದಿನದಿಂದ ಹುಡುಕಾಟ ನಡೆಸುತ್ತಿದ್ದರು.
ಇದೀಗ ನಾಪತ್ತೆಯಾಗಿದ್ದ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ಅವರ ಮೃತದೇಹ ಕುಮಾರಧಾರ ನದಿಯಲ್ಲಿ ಸುಮಾರು 3ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ.
ಹುಡುಕಾಟಕ್ಕೆ ಈಶ್ವರ್ ಮಲ್ಪೆ, ಎಸ್.ಡಿ.ಆರ್.ಎಫ್ ತಂಡ, ಸ್ಥಳೀಯರು, ರವಿಕಕ್ಕೆಪದವು ತಂಡ ಹಾಗೂ ಸುಳ್ಯದ ಅಂಬ್ಯುಲೆನ್ಸ್ ಚಾಲಕರ ಸಂಘ ಸಹಕಾರ ನೀಡಿದ್ದಾರೆ.