ಪುತ್ತೂರು:ವ್ಯಕ್ತಿಯೊಬ್ಬರಿಗೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ ಘಟನೆ ಪುತ್ತೂರು ಮೀನು ಮಾರುಕಟ್ಟೆ ಬಳಿ ಜು.25ರಂದು ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಉರ್ಲಾಂಡಿ ನಿವಾಸಿ ಹರೀಶ್ ಹಲ್ಲೆಗೊಳಗಾದವರು.ಹಣಕಾಸು ಸಂಸ್ಥೆಯೊಂದರ ಪ್ರಸಾದ್ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.ಗಾಯಾಳು ಹರೀಶ್ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ತನ್ನ ಮೇಲೆ ಪ್ರಸಾದ್ ಪೈಪ್‌ನಿಂದ ಹಲ್ಲೆ ಮಾಡಿರುವುದಾಗಿ ಹರೀಶ್ ಆರೋಪಿಸಿದ್ದಾರೆ.
ಫೈನಾನ್ಸ್ ಸಂಸ್ಥೆ ನಡೆಸುತ್ತಿರುವ ಪ್ರಸಾದ್ ಮತ್ತು ಹರೀಶ್ ಅವರ ನಡುವೆ ಹಣಕಾಸಿನ ವಿಚಾರವಾಗಿ ಮೀನು ಮಾರುಕಟ್ಟೆಯ ಬಳಿ ವಾಗ್ವಾದ ನಡೆದಿದೆ.ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.