ಕುಂಬ್ರ, ಕಾವು ಶಾಖೆಗಳಲ್ಲಿ ಮೈಕ್ರೋ ವಿಮೆಗಳ ಮಹತ್ವ ಮಾಹಿತಿ ಕಾರ್ಯಕ್ರಮ
ಪುತ್ತೂರು: ಹಳ್ಳಿ ಹಳ್ಳಿಗೂ ಮೈಕ್ರೋ ವಿಮೆಗಳ ಮಹತ್ವವನ್ನ ತಿಳಿಸುವ ಉದ್ದೇಶದಿಂದ, ಬ್ಯಾಂಕ್ ಆಫ್ ಬರೋಡಾ ವತಿಯಿಂದ ದೇಶವ್ಯಾಪಿ ಫೈನಾನ್ಸಿಯಲ್ ಎನ್‌ಕ್ಲೂಸಿವ್‌ಗೆ ಒಳಪಟ್ಟ ಸ್ಯಾಚುರೇಷನ್ ಅಭಿಯಾನವನ್ನು ಆಯೋಜಿಸಿದ್ದು ಇದರ ಅಂಗವಾಗಿ ಜು.24 ಮತ್ತು 25ರಂದು ಎರಡು ದಿನಗಳ ಕಾಲ ಮಂಗಳೂರು ವಲಯದಲ್ಲಿ ಆಯೋಜಿಸಲಾದ ಮೆಗಾ ಔಟ್‌ರೀಚ್ ಶಿಬಿರಗಳಲ್ಲಿ ಪುತ್ತೂರು ವಲಯದ ಕುಂಬ್ರ ಹಾಗೂ ಕಾವು ಬ್ಯಾಂಕ್ ಆಫ್ ಬರೋಡಾ ಶಾಖೆಗಳಲ್ಲಿ ಕಾರ್ಯಕ್ರಮ ನಡೆಯಿತು. ಜುಲೈ 1ರಿಂದ ಸೆಪ್ಟೆಂಬರ್ 30ರ ತನಕ ದೇಶವ್ಯಾಪಿಯಾಗಿ ಅಭಿಯಾನ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ಯಾಂಕ್ ಆಫ್ ಬರೋಡ ಪ್ರಧಾನ ಕಛೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಂಕಜ್ ತಡಾಸ್ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಮಹತ್ವ ವಿವರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಪುತ್ತೂರು ಪ್ರಾದೇಶಿಕ ಕಚೇರಿಯ ಫೈನಾನ್ಸಿಯಲ್ ಎನ್‌ಕ್ಲೂಸಿವ್ ವಿಭಾಗದ ಉಸ್ತುವಾರಿ ಡಯಾನಾ ವರ್ಗೀಸ್ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕಿಂಗ್ ವ್ಯವಸ್ಥೆಗೆ ತಲುಪಬೇಕು ಎಂದು ಹೇಳಿ, ಅಭಿಯಾನದ ಉದ್ದೇಶ ವಿವರಿಸಿದರು.

ಅಭಿಯಾನದಲ್ಲಿ ಮಂಗಳೂರು ವಲಯ ಫೈನಾನ್ಸಿಯಲ್ ಎನ್‌ಕ್ಲೂಸಿವ್ ನೀತಾ ಕಾಂಚನ, ಬ್ಯಾಂಕ್ ಆಫ್ ಬರೋಡಾ ಪುತ್ತೂರು ರೀಜಿನಲ್ ಆಫೀಸ್‌ನ ಹೆಚ್‌ಆರ್ ಡಿಪಾರ್ಟ್‌ಮೆಂಟ್‌ನ ರಾಜೇಶ್ ಆರ್, ಕುಂಬ್ರ ಶಾಖಾ ಮ್ಯಾನೇಜರ್ ವಿ. ಲಕ್ಷ್ಮೀಪತಿ ರಾಜು, ದ.ಕ ಬಿಸಿನೆಸ್ ಕರೆಸ್ಪಾಂಡೆಂಟ್ ಸೂಪರ್‌ವೈಸರ್ ರಂಜಿತ್ ಯು.ಎನ್, ಸಿಬಿಸಿ ಐರಿಕ್ಸ್ ಟೆಕ್ನಾಲಜಿಸ್ ಫ್ರೈವೆಟ್ ಲಿಮಿಟೆಡ್‌ನ ಧೀರಜ್, ಕುಂಬ್ರ ಬ್ರ್ಯಾಂಚ್‌ನ ಬಿಸಿನೆಸ್ ಕರೆಸ್ಪಾಂಡೆಂಟ್ ಸೀಮಾ ರೈ, ಕಾವು ಬ್ರ್ಯಾಂಚ್ ಮ್ಯಾನೇಜರ್ ಎಮ್. ಅರುಣ್ ರತೇಶ್, ಕಾವು ಶಾಖೆಯ ಬಿಸಿನೆಸ್ ಕರೆಸ್ಪಾಂಡೆಂಟ್ ಪ್ರದೀಪ್ ಪಿ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಉಪಸ್ಧಿತರಿದ್ದರು.
2 ದಿನಗಳ ಕಾಲ ನಡೆದ ಶಿಬಿರಗಳಲ್ಲಿ ಗ್ರಾಮೀಣ ಭಾಗದ ನಾಗರಿಕರು, ಖಾತೆದಾರರು, ಮಹಿಳೆಯರು, ಹಿರಿಯ ನಾಗರಿಕರು ಪಾಲ್ಗೊಂಡು ಸ್ಥಳದಲ್ಲಿಯೇ ವಿಮಾ ನೋಂದಣಿ, ಮಾಹಿತಿ ವಿತರಣೆಯ ಪ್ರಯೋಜನ ಪಡೆದುಕೊಂಡರು.