ಕಾಂಗ್ರೆಸ್‌ ನಿಂದ ಬೂತ್ 75 ಕಾರ್ಯಾಡಿ ಸಭೆ

0

ಪುತ್ತೂರು: ಕುಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಆಳಕೆಮಜಲ್ ರವರ ನೇತೃತ್ವದಲ್ಲಿ ಬೂತ್ 75 ಕಾರ್ಯಾಡಿ ಸಭೆಯು ಬೂತ್ ಅಧ್ಯಕ್ಷ ಅಶ್ರಫ್ ಕೆಜಿಎನ್ ರವರ ಅಧ್ಯಕ್ಷತೆಯಲ್ಲಿ ಮುತ್ತಲಿಬ್ ಕಾರ್ಯಾಡಿ ರವರ ನಿವಾಸದಲ್ಲಿ ನಡೆಯಿತು.


ಈ ಸಭೆಯಲ್ಲಿ ಕಾರ್ಯಾಡಿ ಕುಳ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಅನುದಾನ ಹಾಗೂ ಸ್ಮಶಾನದ ಬರ್ನಲ್ ಮಿಶನ್ ಮತ್ತು ಕಾರ್ಯಾಡಿ ಮಸೀದಿ ಬಳಿ ಹೈ ಮಾಸ್ಕ್ ಲೈಟ್ ಒದಗಿಸುವ ಬಗ್ಗೆ ಚರ್ಚಿಸಲಾಗಿದೆ.

ಶೀಘ್ರದಲ್ಲೇ ವಲಯ ಅಧ್ಯಕ್ಷರು ಶಾಸಕ ಅಶೋಕ್ ರೈ ಅವರ ಗಮನಕ್ಕೆ ತಂದು ಸೂಕ್ತ ಅನುದಾನವನ್ನು ಕೇಳುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಸೇರಿದಂತೆ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here