ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

44,41,355 ರೂ. ನಿವ್ವಳ ಲಾಭ – ಸದಸ್ಯರಿಗೆ  ಶೇ.11 ಡಿವಿಡೆಂಡ್

ವಿಟ್ಲ: ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವಿಟ್ಲ ಶಿವಗಿರಿ ಪೊನ್ನೊಟ್ಟು ಶ್ರೀ ನಾರಾಯಣಗುರು ಸಭಾಭವನದಲ್ಲಿ ಶನಿವಾರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ವಿಟ್ಲದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಪುಣಚ ಮತ್ತು ಮಂಚಿಯಲ್ಲಿ ಎರಡು ಶಾಖೆಗಳನ್ನು ಹೊಂದಿದೆ. 2024-25ನೇ ಆರ್ಥಿಕ ಸಾಲಿನಲ್ಲಿ ಸಂಘವು 98,74,22,869 ರೂ. ವ್ಯವಹಾರ ನಡೆಸಿದ್ದು, 44,41,355 ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಈ ಬಾರಿ ಶೇ.11 ಡಿವಿಡೆಂಡ್ ವಿತರಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಸಂಘವು ಕಳೆದ ಹತ್ತು ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ತರಗತಿಯನ್ನು ಪಡೆದಿರುತ್ತದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಭಾರತೀಯ ಸೈನಿಕ ಸೇವೆಗೈದ ಯೋಧರುಗಳಾದ ಕ್ಯಾಪ್ಟನ್ ದಾಸಪ್ಪ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಧನಂಜಯ ಗೌಡ ನಾಯ್ತೋಟ್ಟು, ಥೋಮಸ್ ಲೋಬೊ, ಉದಯಕುಮಾರ್ ರಾವ್, ಹರೀಶ್ ಶೆಟ್ಟಿ , ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಶೇಖರ ಪರವ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು, ಸರ್ಕಾರಿ ಅಪರ ವಕೀಲರಾಗಿ ನಿಯೋಜನೆಗೊಂಡ ಉಲ್ಲಾಸ್ ಹೆಚ್.  ಪುಣಚರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಾಬು ಕೆ.ವಿ, ನಿರ್ದೇಶಕರುಗಳಾದ ಡಾ.ಗೀತಪ್ರಕಾಶ್, ರಾಘವ ಪೂಜಾರಿ, ರಮೇಶ್ ಕುಮಾರ್, ಜಗದೀಶ್ ವಿ, ಅಭಿಜಿತ್ ಜೆ, ಸಂಜೀವ ಪೂಜಾರಿ ಎಂ, ರವಿ ಬಿ.ಕೆ, ಮಾಧವ ಪಿ,ಶ್ರೀಧರ್ ಬಿ.ವನಿತಾ ಚಂದ್ರಹಾಸ, ಪುಷ್ಪಾ ಎಸ್. ಭಾಗವಹಿಸಿದ್ದರು. ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹೆಚ್.ಜಗನ್ನಾಥ ಸಾಲ್ಯಾನ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಬಾಬು ಕೆ.ವಿ ಸ್ವಾಗತಿಸಿದರು. ನಿರ್ದೇಶಕ ಗೀತಪ್ರಕಾಶ್ ವಂದಿಸಿದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪಿ. ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿ ನಿಶ್ಮಿತಾ ಜಮಾ ಖರ್ಚು , ಅಂಕಿತಾ ಆಸ್ತಿ ಜವಾಬ್ದಾರಿ ತಖ್ತೆ, ಸಚಿತ್ ಕುಮಾರ್ ಲಾಭ ನಷ್ಟ ತಖ್ತೆ ಮಂಡಿಸಿದರು. ಸಿಬ್ಬಂದಿಗಳಾದ ಶಕೀಲಾ, ಪ್ರಮೀಳಾ, ಪಿಗ್ಮಿ ಸಂಗ್ರಾಹಕರಾದ ಮೋನಾಕ್ಷ, ಜಯಪ್ರಕಾಶ್, ವಿವೇಕ್, ಸುಂದರ ಪೂಜಾರಿ, ಸುಜಾತಾ ಸಹಕರಿಸಿದರು. ಸಿಬ್ಬಂದಿ ಜಗನ್ನಾಥ ಪುಣಚ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here