ಪುತ್ತೂರು: ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಆರೋಪದಡಿ ಬಂಧಿತನಾದ ಹಾಸನ ಮೂಲದ ರಾಜು ಎಂಬವರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬೊಳುವಾರು ಎಂಬಲ್ಲಿ ಹಾಸನ ಮೂಲದ ರಾಜು ಎಂಬವರು ಕೈಯಲ್ಲಿ ತಲವಾರು ಹಿಡಿದು ಸಾರ್ವಜನಿಕರಿಗೆ ತೋರಿಸುತ್ತಾ ಮಸೀದಿಯ ಬಳಿ ಸಾರ್ವಜನಿಕರಿಗೆ ಬೆದರಿಕೆಯೊಡ್ದುತ್ತಾ ತಿರುಗುತ್ತಿದ್ದಾನೆ ಎನ್ನಲಾದ ಆರೋಪದಡಿ ಪುತ್ತೂರು ನಗರ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಮತ್ತು ಸಿವಿಲ್ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಯ ಪರವಾಗಿ ವಕೀಲರಾದ ದೇವಾನಂದ ಕೆ, ಅರ್ಪಿತಾ ಅನಿಲ್ ರೈ ಕಡಬ, ಪ್ರಿಯಾ ಪೈಕ, ಹರಿಣಿ ಪಿ ಬಿ ರವರು ವಾದಿಸಿದರು.