ಪುತ್ತೂರು: ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ನ್ಯೂ ಕರಾವಳಿ ಚಿಕನ್ ಸೆಂಟರ್ ನ ಮತ್ತೊಂದು ಚಿಕನ್ ಸೆಂಟರ್ ಪುತ್ತೂರಿನ ಬೊಳುವಾರಿನಲ್ಲಿರುವ ನಾಯಕ್ಸ್ ಬಿಲ್ಡಿಂಗ್ ನಲ್ಲಿ ಜು.28ರಂದು ಶುಭಾರಂಭಗೊಂಡಿತು.
ಪುತ್ತೂರು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅವರು ನೂತನ ಚಿಕನ್ ಸೆಂಟರ್ ಉದ್ಘಾಟಿಸಿದರು.

ದುಹಾ ಆಶೀರ್ವಚನ ನೀಡಿದ ದರ್ಬೆ ಮಸೀದಿಯ ಖತೀಬ ಉಸ್ತಾದ್ ಅಬ್ದುಲ್ ಕರೀಂ ದಾರಿಮಿ ಮಾತನಾಡಿ, ಭಾರತದಲ್ಲಿ ಎಲ್ಲಾ ಧರ್ಮೀಯರು ಸೌಹಾರ್ದದಿಂದ ಬಾಳಬೇಕು. ಈ ನಿಟ್ಟಿನಲ್ಲಿ ಸಾಗುತ್ತಿರುವ ಈ ಚಿಕನ್ ಸೆಂಟರ್ ಮಾಲಕರು ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಇವರ ಉದ್ಯಮವು ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.
ಚಿಕನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ, ರವೀಂದ್ರ ಶೆಟ್ಟಿ, ನ್ಯೂ ಕರಾವಳಿ ಚಿಕನ್ ಸೆಂಟರ್ ನಲ್ಲಿ ನೀಡುವ ಚಿಕನ್ ಸ್ಪೆಷಲ್ ಆಗಿರುತ್ತದೆ. ಉತ್ತಮ ಸೇವೆಯನ್ನೂ ನೀಡಲಾಗುತ್ತಿದೆ. ಇನ್ನಷ್ಟು ಚಿಕನ್ ಸೆಂಟರ್ ಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಅತಿಥಿಯಾಗಿ ಆಗಮಿಸಿದ್ದ ಯುವ ಉದ್ಯಮಿ ನೌಶಾದ್ ಹಾಜಿ ಮಾತನಾಡಿ, ದಾನ ಮಾಡಲು ಎಲ್ಲರಿಗೂ ಆಗುವುದಿಲ್ಲ. ಆದರೆ ನ್ಯೂ ಕರಾವಳಿ ಚಿಕನ್ ಸೆಂಟರ್ ಮಾಲಕರು ಹಬ್ಬದ ಸಂದರ್ಭಗಳಲ್ಲಿ, ಬಡವರಿಗೆ ದಾನ ಮಾಡುತ್ತಾರೆ. ರುಚಿ ಮತ್ತು ಶುಚಿಕರ ಕೋಳಿ ಮಾಂಸವನ್ನು ಈ ಅಂಗಡಿಯಲ್ಲಿ ನೀಡಲಾಗುತ್ತದೆ ಎಂದು ಹೇಳಿ ಶುಭಾಶಯ ಕೋರಿದರು.
ಬೊಳುವಾರು ಮಸೀದಿ ಪ್ರಧಾನ ಕಾರ್ಯದರ್ಶಿ ಹನೀಪ್ ಬೊಳುವಾರು, ಪುತ್ತೂರು ಕ್ರೆಸೆಂಟ್ ಯಂಗ್ ಮೆನ್ಸ್ ಅಧ್ಯಕ್ಷ ಅಬ್ದುಲ್ ರಝಾಕ್ ಬಿ ಎಚ್ ಬಪ್ಪಳಿಗೆ ಅವರು ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.
ಉಸ್ತಾದ್ ಸಿದ್ದೀಕ್ ಫೈಝಿ ಖತೀಬ್ ಬೊಳುವಾರು, ಅಫ್ ನಾನ್ ಚಿಕನ್ ಸೆಂಟರ್ ಮಾಲೀಕ ಅಬ್ದುಲ್ ಅಝೀಝ್ ಪುತ್ತೂರು, ಆಕಾಶ್ ಫೂಟ್ ವೇರ್ ಮಾಲಿಕರಾದ ಝಿಯಾದ್ ಹಾಜಿ ದರ್ಬೆ, ಹಮೀದ್ ಬೊಳುವಾರು, ಇಬ್ರಾಹಿಂ ಹಾಜಿ ಸುರಿಬೈಲು, ಉಪಸ್ಥಿತರಿದ್ದರು. ದಾರುಲ್ ಹಸನಿಯಾ ಅಕಾಡೆಮಿ ವಿದ್ಯಾಸಂಸ್ಥೆಯ ಆಯೋಜಕ ಅನ್ವರ್ ಸ್ವಾದಿಕ್ ಮೌಲವಿ ಮೊಟ್ಟೆತ್ತಡ್ಕ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕರಾವಳಿ ಚಿಕನ್ ಸೆಂಟರ್ ಮಾಲಕ ಅಬ್ದುಲ್ ಕರೀಂ ಅವರು ಅತಿಥಿಗಳನ್ನು ಸತ್ಕರಿಸಿ ವಂದಿಸಿದರು.