ಕಡಬ: ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷದ್ ನ ಅಧ್ಯಕ್ಷರಾಗಿ ಶಿವರಾಮ ಶೆಟ್ಟಿ ಕೇಪು ಇವರು ಆಯ್ಕೆಯಾಗಿದ್ದಾರೆ.
ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ವರ್ಗದಲ್ಲಿ ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷರಾಗಿ ಶಿವರಾಮ ಶೆಟ್ಟಿ ಕೇಪು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಪ್ರಾಂತ ಉಪಾಧ್ಯಕ್ಷ ಯು .ಪೂವಪ್ಪ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮೊದಲವದರು ಉಪಸ್ಥಿತರಿದ್ದರು.
ಧಾರ್ಮಿಕ ಮುಂದಾಳು ಶಿವರಾಮ ಶೆಟ್ಟಿ
ನೂತನವಾಗಿ ಆಯ್ಕೆಯಾದ ಶಿವರಾಮ ಶೆಟ್ಟಿಯವರು ಸುಮಾರು 42 ವರ್ಷಗಳಿಂದ ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಹಕಾರಿ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ, ಪ್ರಸ್ತುತ ಕುಟ್ರುಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಹಳೆಸ್ಟೇಷನ್ ಕರೆ ಅಭಿವೃದ್ಧಿ, ಅಮೃತಸರೋಹರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.