ಅಧ್ಯಕ್ಷ: ಸೆಬಾಸ್ಟಿನ್ ಕೆ.ಕೆ., ಪ್ರಧಾನ ಕಾರ್ಯದರ್ಶಿ: ಪೌಲೋಸ್ ಪಿ.ಸಿ.
ನೆಲ್ಯಾಡಿ: ಕಡಬ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿ ಸೆಬಾಸ್ಟಿನ್ ಕೆ.ಕೆ.ಉದನೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪೌಲೋಸ್ ಪಿ.ಸಿ. ಇಚ್ಲಂಪಾಡಿ ಆಯ್ಕೆಯಾಗಿದ್ದಾರೆ.
ಜು.26ರಂದು ಕಡಬ ಒಕ್ಕಲಿಗ ಗೌಡ ಸಂಘದ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕಾರ್ಗಿಲ್ ದಿನಾಚರಣೆ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.
ಸಂಘದ ಸ್ಥಾಪಕಾಧ್ಯಕ್ಷ ಮಾಥ್ಯು ಟಿ.ಜಿ.ಯವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಹೊಸ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಓಡಿಯಪ್ಪ ಗೌಡ ಬೆತ್ತೋಡಿ, ಜೋರ್ಜ್ ವಿ.ಎಂ.ನೆಲ್ಯಾಡಿ, ಕೋಶಾಧಿಕಾರಿಯಾಗಿ ಸ್ಟೀಫನ್ ಎ.ನೆಲ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಇಚ್ಲಂಪಾಡಿ, ಜೊತೆ ಕೋಶಾಧಿಕಾರಿಯಾಗಿ ಸೋಮಶೇಖರ ಎನ್., ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ್ ವಿ., ಗೌರವಾಧ್ಯಕ್ಷರಾಗಿ ಸುಬ್ರಾಯ ಬೈಪಾಡಿತ್ತಾಯ ಆಯ್ಕೆಗೊಂಡರು. ಸ್ಥಾಪಕಾಧ್ಯಕ್ಷ ಮ್ಯಾಥ್ಯು ಟಿ.ಜಿ., ಅವರನ್ನು ಸಮಿತಿಗೆ ನೇಮಕ ಮಾಡಲಾಯಿತು.
ನೂತನ ಪದಾಽಕಾರಿಗಳಿಗೆ ಚುನಾವಣಾ ಅಧಿಕಾರಿಯಾಗಿದ್ದ ಮ್ಯಾಥ್ಯು ಟಿ.ಜಿ.ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಹೊಸ ಸದಸ್ಯರ ಸೇರ್ಪಡೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾದ ಜೆ.ಪಿ.ಎಮ್ ಚೆರಿಯನ್, ಗೌರವಾಧ್ಯಕ್ಷರಾದ ವಾಸುದೇವ ಬಾನಡ್ಕ, ಜಿಲ್ಲಾ ವೀರನಾರಿಯರ ಸಂಘದ ಅಧ್ಯಕ್ಷೆ ಗೀತಾ ಶುಭ ಹಾರೈಸಿದರು. ಬಂಟ್ವಾಳ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎ.ವಿ.ಗೌಡ ಅವರು ಕಾರ್ಗಿಲ್ ದಿನದ ಬಗ್ಗೆ ತಿಳಿಸಿದರು. ನೂತನ ಅಧ್ಯಕ್ಷ ಸೆಬಾಸ್ಟಿನ್ ಕೆ.ಕೆ.ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಸಮಸ್ಯೆಗಳ ಪರಿಹಾರ ಹಾಗೂ ಸಂಘದ ಬೆಳೆವಣಿಗೆ ಕುರಿತು ಚಿಂತನೆ ನಡೆಸುವುದಾಗಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎನ್.ವರದಿ ಮಂಡಿಸಿದರು. ಕೋಶಾಧಿಕಾರಿ ಸುಬ್ರಾಯ ಬೈಪಾಡಿತ್ತಾಯ ಅವರು ಕಳೆದ ವರ್ಷದ ಲೆಕ್ಕಪತ್ರ ಮಂಡಿಸಿದರು. ಸುಬ್ರಹ್ಮಣ್ಯ ಹೈತಾಡಿ ವಂದಿಸಿದರು. ಸೋಮಶೇಖರ ಎನ್. ನಿರೂಪಿಸಿದರು. ಗೀತಾ ಪ್ರಾರ್ಥಿಸಿದರು.