ಕಡಬ ಪಟ್ಟಣ ಪಂಚಾಯತ್ ಚುನಾವಣೆ : ಬಿಜೆಪಿ 10 ವಾರ್ಡ್ ಗಳ ಅಭ್ಯರ್ಥಿ ಘೋಷಣೆ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ನ 13 ವಾರ್ಡ್ ಗಳ ಪೈಕಿ 10 ವಾರ್ಡ್ ಗಳಿಗೆ ಬಿಜೆಪಿಯಿಂದ ತನ್ನ ಅಭ್ಯರ್ಥಿಗಳನ್ನು ಘೋಷನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.


ವಾರ್ಡ್ 2 ಕೋಡಿಬೈಲು ಇಲ್ಲಿಗೆ ಮಿಸಲಾದ ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಕುಸುಮ ಅಂಗಡಿಮನೆ, ವಾರ್ಡ್ 3, ಪನ್ಯ ಸಾಮಾನ್ಯ ಸ್ಥಾನಕ್ಕೆ ಆದಂ ಕುಂಡೋಳಿ,ವಾರ್ಡ್ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಅಶೋಕ್ ಪಿ, ಮಾಲೇಶ್ವರ 5. ವಾರ್ಡಿಗೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಪ್ರಕಾಶ್ ಎನ್.ಕೆ, ಕಡಬ 6 ನೇ ವಾರ್ಡಿನ ಮಹಿಳೆ ಸ್ಥಾನಕ್ಕೆ ಪ್ರೇಮ, ಪಿಜಕಳ 8ನೇ ವಾರ್ಡಿನ ಸಾಮಾನ್ಯ ಸ್ಥಾನಕ್ಕೆ ದಯಾನಂದ ಪಿ. ಮೂರಾಜೆ 9ನೇ ವಾರ್ಡಿನ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕುಂಞಣ್ಣ ಕುದ್ರಡ್ಕ, ದೊಡ್ಡಕೊಪ್ಪ 10ನೇ ವಾರ್ಡಿನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಗುಣವತಿ ರಘುರಾಮ, ಕೋಡಿಂಬಾಳ 11ನೇ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅಕ್ಷತಾ, ಪುಳಿಕುಕ್ಕು 13ನೇ ವಾರ್ಡ್‌ ನ ಪರಿಶಿಷ್ಠ ಪಂಗಡ ಸ್ಥಾನಕ್ಕೆ ಸದಾನಂದ ನಾಯ್ಕ್ ಅವರನ್ನು ಅಭ್ಯರ್ಥಿಗಳಾಗಿ ಪೋಷಣೆ ಮಾಡಲಾಗಿದೆ. ಇನ್ನು ಉಳಿದ 3 ವಾರ್ಡ ಗಳ ಅಭ್ಯರ್ಥಿಗಳ ಘೋಷಣೆ ಇನ್ನಷ್ಠೆ ಪ್ರಕಟವಾಗಬೇಕಿದೆ.

LEAVE A REPLY

Please enter your comment!
Please enter your name here