ಪುತ್ತೂರು: ಒಳಮೊಗ್ರು ಗ್ರಾಮ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ರಾಗಿ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿಯವರನ್ನು ನೇಮಕ ಮಾಡಲಾಗಿದೆ.ಶಕ್ತಿಕೇಂದ್ರದ ಅಧ್ಯಕ್ಷರಾಗಿದ್ದ ಎಸ್.ಮಾಧವ ರೈ ಕುಂಬ್ರರವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಈ ಆಯ್ಕೆಯನ್ನು ಮಾಡಲಾಗಿದೆ.
ಮಹೇಶ್ ರೈ ಕೇರಿಯವರು ಒಳಮೊಗ್ರು ಬಿಜೆಪಿ 165 ನೇ ಬೂತ್ ಸಮಿತಿ ಸಂಚಾಲಕರಾಗಿ , ಗ್ರಾಮಾಂತರ ಮಂಡಲ ಕಾರ್ಯಾಕಾರಿಣಿ ಸದಸ್ಯರಾಗಿ , ಬಿಜೆಪಿ ಮಾಧ್ಯಮ ಪ್ರಕೋಷ್ಠ ಸಂಚಾಲಕರಾಗಿ , ಮನ್ ಕೀ ಬಾತ್ ಕಾರ್ಯಕ್ರಮ ದ ಮಂಡಲ ಸಹ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಎರಡನೇ ಅವಧಿಗೆ ಒಳಮೊಗ್ರು ಗ್ರಾಮ ಪಂಚಾಯತ್ನ ಸದಸ್ಯರಾಗಿ ಸೇವೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಬಿಜೆಪಿ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ.