ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಖಾಸಗಿ‌ ಬಸ್ಸ್ ನಿಲ್ದಾಣದ ಆಟೋ ಚಾಲಕರ ಸಭೆ

0

ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಟ್ರಾಫಿಕ್ ಸಮಸ್ಯೆಯು ಈಗಾಗಲೇ ಪರಿಹಾರ ಆಗಿದ್ದು ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ರಿಕ್ಷಾ ಚಾಲಕರು ಅಡ್ಡಾ ದಿಡ್ಡಿಯಾಗಿ ಆಟೋರಿಕ್ಷಾ ನಿಲುಗಡೆ ಮಾಡುತ್ತಿರುವ ದೂರಿನ ಬಗ್ಗೆ ಖಾಸಗಿ ಬಸ್ ನಿಲ್ದಾಣದ ಆಟೋ ಚಾಲಕರ ಸಭೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿ ಪಟ್ಟಣ ಪಂಚಾಯತ್ ‌ನ ನಿಯಮಗಳನ್ನು ಪಾಲಿಸದೆ ಇದ್ದರೆ ಆಟೋ ಚಾಲಕರಿಗೆ ಮುಂದೆ ಒದಗಬಹುದಾದ ಸಮಸ್ಯೆಯ ವಿವರಗಳ ಬಗ್ಗೆ ಆಟೋ ಚಾಲಕರಿಗೆ ಮಾಹಿತಿ ನೀಡಿದರು. ಆಟೋ ಚಾಲಕರು ಪಟ್ಟಣ ಪಂಚಾಯತ್ ನ ನಿಯಮಗಳನ್ನು ಪಾಲಿಸುವುದಾಗಿ ಭಾರವಸೆ ನೀಡಿ, ಕೆಲವೊಂದು ಸರಕು ವಾಹನಗಳಿಂದ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ಕುರಿತು ಮನವಿ ಮಾಡಿದರು.

ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಮುಖ್ಯಾಧಿಕಾರಿ ಕರುಣಾಕರ ವಿ.ಭರವಸೆ ನೀಡಿದರು. ನಂತರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಟೋ ಚಾಲಕರಿಗೆ ಇ- ಖಾತಾ ಅಭಿಯಾನದ ಮಾಹಿತಿ ನೀಡಿ ತಮ್ಮ ಆಸ್ತಿಯನ್ನು ಪಟ್ಟಣ ಪಂಚಾಯತ್ ನಲ್ಲಿ ಇ- ಖಾತಾ ಮಾಡಿಸಲು ತಿಳಿಸಲಾಯ್ತು. ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ ರವರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here