ಇಲೆಕ್ಟ್ರಿಕ್ ಸೈಕಲ್ ತಯಾರಿಸಿದ ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾರ್ಥಿ ವಿಶಾಲ್

0


ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ವಿಶಾಲ್ ಬೈಸಿಕಲನ್ನು ಇಲೆಕ್ಟ್ರಿಕ್ ಸೈಕಲ್ನ್ನಾಗಿ ಮಾರ್ಪಡಿಸಿ ತಾನು ತಯಾರಿಸಿದ ಇಲೆಕ್ಟ್ರಿಕ್ ಸೈಕಲ್‌ನಲ್ಲಿಯೇ ಕಾಲೇಜಿಗೆ ಬರುತ್ತಿರುವುದು ಹೆತ್ತವರಿಗೆ ಮತ್ತು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ.

ಲೀಥಿಯಂ ಬ್ಯಾಟರಿ, ಡಿ.ಸಿ ಮೋಟಾರ್ ಹಾಗೂ ಸ್ಟೆಪ್‌ಅಪ್ ಕನ್ವರ್ಟರ್‌ಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿದ ಈ ವಾಹನದ ವೇಗ 35-40ಕಿ.ಮಿ/ಗಂ. ಈ ವಾಹನಕ್ಕೆ ಹೆಡ್‌ಲೈಟ್, ಹಾರ್ನ್, ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಮುಂದೆಯೂ ಇಂತಹ ಹೊಸ-ಹೊಸ ಅನ್ವೇಷಣೆಗಳನ್ನು ಮಾಡುವ ಹುರುಪು ಹಾಗೂ ಪ್ರೋತ್ಸಾಹ ಸಿಗಲು ಆತ ವಿವೇಕಾನಂದ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದಲ್ಲಿ ಸೇರಿರುತ್ತಾನೆ. ಆತನಿಗೆ ಈ ವಿಚಾರದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here