ನೆಲ್ಯಾಡಿ: ಗೋಳಿತ್ತೋಟ್ಟು ಗ್ರಾಮದ ಡೆಮ್ಮೆಜಾಲ್ ನಿವಾಸಿ ಕುಶಾನಿ ಶೆಟ್ಟಿಯ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಅವರ ತಾಯಿ ನಿಶ್ಮಿತಾ ಶೆಟ್ಟಿ , ತಂದೆ ಸಂದೇಶ್ ಶೆಟ್ಟಿ, ಅಜ್ಜ ಶಿವರಾಮ್ ರೈ
ಅವರು ಕಳೆಂಜ ಗ್ರಾಮದ ಶಿಬರಾಜೆ ಪಾದೆ ಅಂಗನವಾಡಿ ಮಕ್ಕಳೊಂದಿಗೆ ಆಚರಿಸಿ ಅಲ್ಲಿಗೆ ಉಪಯುಕ್ತವಾದ ಹೊಸ ಪ್ಯಾನ್ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ, ಸಹಾಯಕಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಈ ಕೊಡುಗೆ ಕಾರ್ಯಕ್ರಮವು ಇತರರಿಗೆ ಪ್ರೇರಣೆಯಾಗಲಿ ಎಂಬ ಆಶಯವನ್ನು ಅತಿಥಿಗಳು ವ್ಯಕ್ತಪಡಿಸಿದರು.