ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ಆಟಿಯ ವಿವಿಧ ತಿನಿಸುಗಳು
ಕಡಬ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಕಡಬ ಮತ್ತು ಮರ್ದಾಳ ವಲಯಗಳ ಎಲ್ಲಾ ಬಿಲ್ಲವ ಗ್ರಾಮ ಸಮಿತಿ ಹಾಗೂ ಮಹಿಳಾ ವೇದಿಕೆಯ ಜಂಟಿ ಆಶ್ರಯದಲ್ಲಿ ಆ.3ರಂದು ಬಿಲ್ಲವರ ಆಟಿಕೂಟ ಕಾರ್ಯಕ್ರಮವು ಮರ್ದಾಳ ಸಮೀಪದ ಮಿತ್ತೋಡಿ ಉದಯ ಪೂಜಾರಿ ಎಂಬವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ಹೇಮಾವತಿ ಮಿತ್ತೋಡಿ ಇವರು ನೆರವೇರಿಸಿದರು, ಬಳಿಕ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀ ನಾರಾಯಣ ಗುರುಪೀಠ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷ ಶಶಿಧರನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಡಬ ತಾಲೂಕು ಬಿಲ್ಲವ ಸಂಚಾಲನ ಸಮಿತಿಯ ಅಧ್ಯಕ್ಷ ಸತೀಶ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಟಿಯ ಮಹತ್ವ ಮತ್ತು ಬಿಲ್ಲವ ಸಮಾಜದ ಸಂಘಟನೆಯ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಜ್ಞಾನಸುಧಾ ವಿದ್ಯಾಲಯದ ಸಂಚಾಲಕ ಬಿ.ಎಲ್. ಜನಾರ್ದನ ಆಟಿಯ ಮಹತ್ವ ಮತ್ತು ತುಳುನಾಡಿನ ಸಂಸ್ಕೃತಿಯ ಬಗ್ಗೆ, ನಮ್ಮ ಮನೆಯ ಆಚಾರ ವಿಚಾರಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಡಬ ವಲಯ ಸಂಚಾಲಕ ಲಕ್ಷ್ಮೀಶ ಬಂಗೇರ ಪೆಲತ್ತೋಡಿ. ಮೂ. ಸೇ. ಸ. ಸಂಘ (ನಿ.) ಆಲಂಕಾರು ಇದರ ಮಾಜಿ ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪಿ.ವೈ. ಕುಸುಮ, ಗ್ರಾಮದ ಗುರ್ಕಾರ, ಪ್ರಗತಿಪರ ಕೃಷಿಕ ಬಲ್ಯ ಮತ್ರಾಡಿಯ ಲಿಂಗಪ್ಪ ಪೂಜಾರಿ, ಪುತ್ತೂರು ತಾಲೂಕು ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶ್ವೇತ ಕುದುಂಬೂರು. ಮೂ. ಸೇ. ಸ. ಸಂಘ (ನಿ.) ಆಲಂಕಾರು ಇದರ ನಿರ್ದೇಶಕ ಆನಂದ ಪೂಜಾರಿ ಮಠದ ಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಬಹುಮಾನದ ಪ್ರಾಯೋಜಕರಾದ ವಿನಯ ಗೆರ್ತಿಲ ಇವರ ತಾಯಿ ಪಿ. ವೈ. ಕುಸುಮ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿತರಿಸಿದರು.

ಸನ್ಮಾನ:
ಸಂಘಟನಾ ಚತುರ ಗೋಪಿನಾಥ ನಿಡ್ಮೇರು, ದೈವದ ಕೆಲಸಗಾರ ಹಾಗೂ ಗುರ್ಕಾರ ಮೇದಪ್ಪ ಪೂಜಾರಿ ಉಂಡಿಲ, ನಾಟಿ ವೈದ್ಯೆ ಚೆನ್ನಮ್ಮ ಪೂಜಾರಿ ಮಾದೇರಿಕೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಸಹಕಾರ-ಗೌರವಾರ್ಪಣೆ:
ಕಾರ್ಯಕ್ರಮದ ಮೆರುಗು ತಂದ ಆಟಿಯ ವಿಶೇಷ ತಿನಸುಗಳನ್ನು ಮಾಡಿಕೊಂಡು ಬಂದ 23 ಜನರನ್ನು ಗೌರವಿಸಲಾಯಿತು. ಹಾಗೂ ಕಾರ್ಯಕ್ರಮದಲ್ಲಿ ದುಡಿದ ಎಲ್ಲಾ ಸದಸ್ಯರನ್ನು ಕೂಡ ಗೌರವಿಸಲಾಯಿತು ಹಾಗೂ ಕಾರ್ಯಕ್ರಮಕ್ಕೆ ಸ್ಮರಣಿಕೆಯ ಪ್ರಾಯೋಜಕತ್ವ ನೀಡಿದ ಅಶ್ವಥ್ ಪಿಜಕ್ಕಳ, ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಉದಯ ಪೂಜಾರಿ ಮಿತ್ತೋಡಿ ಹಾಗೂ ಮನೆಯವರನ್ನು ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ದುಡಿದ ಗ್ರಾಮ ಸಮಿತಿಯ ಎಲ್ಲಾ ಅಧ್ಯಕ್ಷರುಗಳನ್ನು ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷರನ್ನು ಗೌರವಿಸಲಾಯಿತು, ಈ ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಭಾಗವಹಿಸಿದರು. ಜಯಪ್ರಕಾಶ್ ದೋಳ ಸ್ಬಾಗತಿಸಿ, ಅನಿತಾ ಕುತ್ಯಾಡಿ ವಂದನಾರ್ಪಣೆ ಸಲ್ಲಿಸಿದರು. ಶ್ರೇಯ ವಿದ್ಯಾನಗರ ಪ್ರಾರ್ಥನೆ ಹಾಡಿದರು. ಕೃಷ್ಣಪ್ಪ ಅಮೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜ ಬಾಂಧವರು ಆಟಿಯ ವಿಶೇಷ ಭೋಜನವನ್ನು ಸವಿದರು. ಕೃಷ್ಣಪ್ಪ ಅಮೈ ಸ್ವಾಗತಿಸಿ, ಮಹಿಳಾ ವೇದಿಕೆಯ ವಲಯ ಸಂಚಾಲಕಿ ಶ್ವೇತಾ ಕುದುಂಬೂರು ಅತಿಥಿಗಳನ್ನು ಗೌರವಿಸಿದರು.