ಪ್ರಶಾಂತಿ ಸಧ್ಭಾವನಾ ಟ್ರಸ್ಟಿ ನಿಂದ ಸಹಾಯಹಸ್ತ

0

ಪುತ್ತೂರು : ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ ವರ್ಷದ ಶುಭ ಸಂದರ್ಭದಲ್ಲಿ ತಿಂಗಳಾಡಿ ಸಮೀಪದ ತೆಗ್ಗು ತಿಮ್ಮಪ್ಪ ರಾಧಿಕಾ ಬಡ ಕುಟುಂಬಕ್ಕೆ ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ ಪುತ್ತೂರು ವತಿಯಿಂದ ರೂ.8000 ಮೌಲ್ಯದ ಅಗತ್ಯ ವಸ್ತುಗಳಾದ ಎರಡು ಕುರ್ಚಿ, ಬೆಡ್‌ ಶೀಟ್ಸ್‌, ಧೋತಿ-ಲುಂಗಿಗಳು, ಸೀರೆ, ಸ್ಟೀಲ್‌ ಪಾತ್ರೆಗಳು, ಪ್ಲೇಟುಗಳು, ಛತ್ರಿ ಇತ್ಯಾದಿ ಜತೆಗೆ ಎರಡು ತಿಂಗಳಿನ ದಿನಸಿ ವಸ್ತುಗಳನ್ನು ನೀಡಲಾಯಿತು.

ಬೆಂಗಳೂರಿನ ಜಯಲಕ್ಷ್ಮೀ ವಸ್ತುಗಳನ್ನು ಹಸ್ತಾಂತರಿಸಿ, ತನ್ನ ವೈಯುಕ್ತಿಕ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಟ್ರಸ್ಟಿನ ಯಂ ಮಧುಸೂಧನ ನಾಯಕ್‌, ಸಂಪ್ಯ ನಾರಾಯಣ ರೈ, ರೂಪಕಲಾ, ರೇಖನಾಥ ರೈ, ಎ.ಟಿ ರೈ, ಬನ್ನೂರು ಜಗನ್ನಾಥ ರೈ, ಪ್ರಮುಖ ರೈ, ದಾಮೋದರ್‌, ಸದಾ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here