ಬಂಟರ ಸಂಘ ಕುಳ ಕುಂಡಡ್ಕದಿಂದ ಪ್ರತಿಭಾನ್ವಿತ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

0

ಪುತ್ತೂರು: ಬಂಟರ ಸಂಘ ಕುಳ ಕುಂಡಡ್ಕ ವಿಟ್ಲ ಮೂಡ್ನೂರು, ಕುಳ ಇಡ್ಕಿದು ,ಗ್ರಾಮ ವ್ಯಾಪ್ತಿಗೆ ಒಳಪಟ್ಟು ಪಿಯುಸಿ ಹಾಗೂ SSLC ಯಲ್ಲಿ ಅಧಿಕ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಅವರ ಮನೆ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಕುಳ ಕುಂಡಡ್ಕ ಇದರ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪಿಲಿಂಜ ವಹಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಮರುವಾಳ, ಪದಾಧಿಕಾರಿಗಳಾದ ರಘುರಾಮ ಶೆಟ್ಟಿ ಬರೆ, ಜಯಕರ್ ಶೆಟ್ಟಿ ಮರುವಾಳ, ಪ್ರಶಾಂತ್ ಶೆಟ್ಟಿ ಬರೆ ,ಪದ್ಮನಾಭ ಶೆಟ್ಟಿ ಚಪ್ಪಡಿಯಡ್ಕ, ಚಿದಾನಂದ ಶೆಟ್ಟಿ ಉಜಿರೆಮಾರು ಅನಿಲ್ ಶೆಟ್ಟಿ ಉಜಿರೆಮಾರು ಮಹಿಳಾ ಪದಾಧಿಕಾರಿಗಳಾದ ಶ್ಯಾಮಲ ಶೆಟ್ಟಿ ಕುಂಡಡ್ಕ ಶೆಡ್ಡು , ಗೀತಾ ಶೆಟ್ಟಿ ಕುಂಡಡ್ಕ, ವಿಜಯಲಕ್ಷ್ಮಿ ವೇಣುಗೋಪಾಲ್ ಶೆಟ್ಟಿ ಮರುವಾಳ ಭಾಗವಹಿಸಿದರು.

ಹರೀಶ್ ಶೆಟ್ಟಿ ಕೊಳಂಬೆ ಹಾಗೂ ಸುಜಾತ ದಂಪತಿಗಳ ಮಗಳು ಆತ್ಮಿ ಶೆಟ್ಟಿ ,ರವೀಂದ್ರ ಮೇಲಂಟ ಕಲ್ಲಂದಡ್ಕ ಹಾಗೂ ತಾರುಣ್ಯ ದಂಪತಿಗಳ ಮಗಳು ಗೌತಮಿ ಶೆಟ್ಟಿ ,ಸತೀಶ್ ಶೆಟ್ಟಿ ಮೂಡೈಮಾರ್ ಹಾಗೂ ಪುಷ್ಪ ಶೆಟ್ಟಿ ದಂಪತಿಗಳ ಮಗಳು ಪ್ರಣತಿ ಶೆಟ್ಟಿ,ಪುರುಷೋತ್ತಮ್ ಶೆಟ್ಟಿ ಹಾಗೂ ಲತಾ ಮೂಡೈಮಾರ್ ದಂಪತಿಗಳ ಮಗ ಸಂಕೇತ್ ಶೆಟ್ಟಿ ,ಚಂದ್ರಹಾಸ ಶೆಟ್ಟಿ ಪಿಲಿಂಜ ಹಾಗೂ ಸಾರಿಕಾ ಶೆಟ್ಟಿ ದಂಪತಿಗಳ ಮಗಳು ಸಾನ್ವಿ ಶೆಟ್ಟಿ ,ಜಯರಾಮ್ ಶೆಟ್ಟಿ ಸೇನರೇ ಮಜಲು ಹಾಗೂ ಮೀನಾಕ್ಷಿ ದಂಪತಿಗಳ ಮಗ ಜಿತೇಶ್ ಶೆಟ್ಟಿ,ಬಾಲಕೃಷ್ಣ ಶೆಟ್ಟಿ ಉಜ್ರೆಮಾರ್ ಹಾಗೂ ಗೀತಾ ದಂಪತಿಗಳ ಮಗ ಶ್ರೀರಾಜ್ ಶೆಟ್ಟಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here