ಪುತ್ತೂರು: ಸವಣೂರು ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ರವರು ಆಯ್ಕೆಯಾಗಿದ್ದಾರೆ.

ಕಾರ್‍ಯದರ್ಶಿಯಾಗಿ ರಾಜೇಶ್ ಇಡ್ಯಾಡಿ, ಉಪಾಧ್ಯಕ್ಷರಾಗಿ ತೀರ್ಥರಾಮ್ ಕೆಡೆಂಜಿ, ಜೊತೆಕಾರ್‍ಯದರ್ಶಿಯಾಗಿ ತೇಜಸ್ ಬೇರಿಕೆ, ಕೋಶಾಧಿಕಾರಿಯಾಗಿ ಹಿತೇಶ್ ಮೆದು, ನಿರ್ದೇಶಕರುಗಳಾಗಿ ಜಗದೀಶ್ ಆರೇಲ್ತಡಿ, ಹೇಮಂತ್ ಕುದ್ಮಾರು, ಮಹೇಶ್ ಅಟ್ಟೋಲೆ, ವಿನಯ್ ನಾಲ್‌ಗುತ್ತು, ಸತೀಶ್ ಬಲ್ಯಾಯ ಹಾಗೂ ಹಿತೇಶ್ ನೆಕ್ಕರೆ ರನ್ನು ಆಯ್ಕೆ ಮಾಡಲಾಗಿದೆ.
ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಕುದ್ಮಾರು ಹಾಗೂ ಕಾರ್‍ಯದರ್ಶಿ ಕೀರ್ತನ್ ಕೋಡಿಬೈಲು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿದರು. ಯುವಕ ಮಂಡಲದ ಮಾರ್ಗದರ್ಶಕ ಗಿರಿಶಂಕರ್ ಸುಲಾಯ, ಮಾಜಿ ಅಧ್ಯಕ್ಷರುಗಳಾದ ದಿನೇಶ್ ಮೆದು, ತಾರಾನಾಥ ಕಾಯರ್ಗ, ತಾರಾನಾಥ ಸವಣೂರು, ರಾಕೇಶ್ ರೈ ಕೆಡೆಂಜಿ, ಸುರೇಶ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.